ರೈತ ಸಮುದಾಯಕ್ಕೆ ಮತ್ತೊಂದು ಸಿಹಿಸುದ್ದಿ : ಇಂದು ಪಿಎಂ ಕಿಸಾನ್ ಯೋಜನೆಯ 2 ನೇ ಕಂತು ಖಾತೆಗೆ ಜಮಾ!

ರೈತ ಸಮುದಾಯಕ್ಕೆ ಮತ್ತೊಂದು ಸಿಹಿಸುದ್ದಿ : ಇಂದು ಪಿಎಂ ಕಿಸಾನ್ ಯೋಜನೆಯ 2 ನೇ ಕಂತು ಖಾತೆಗೆ ಜಮಾ!

ಬಾಗಲಕೋಟೆ : ಸಿಎಂ ಬಸವರಾಜ ಬೊಮ್ಮಾಯಿ ಅವರು ಇಂದು ಬಾಗಲಕೋಟೆ ಜಿಲ್ಲಾ ಪ್ರವಾಸ ಕೈಗೊಂಡಿದ್ದು, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ.

ಬಾಗಲಕೋಟೆ ಜಿಲ್ಲಾ ಪ್ರವಾಸ ಕೈಗೊಳ್ಳಲಿರುವ ಸಿಎಂ ಬೊಮ್ಮಾಯಿ ಅಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ.

ಮಧ್ಯಾಹ್ನ 1:30 ಕ್ಕೆ ಹುನಗುಂದ ಗ್ರಾಮಕ್ಕೆ ಭೇಟಿ ನೀಡುವ ಸಿಎಂ ಅಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ನಂತರ ಮರೋಳ ಗ್ರಾಮದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಭಾಗಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ : ರೈತರ ಖಾತೆಗೆ ಹಣ ಜಮಾ

ಇಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 2022-2023 ನೇ ಸಾಲಿನ 2 ನೇ ಕಂತಿನ ಬಿಡುಗಡೆ ಆರ್ಥಿಕ ನೆರವಾದ 975 ಕೋಟಿ ರೂ. ಮೊತ್ತವನ್ನು 48,75,000 ರೈತರ ಖಾತೆಗಳಿಗೆ ಬಿಡುಗಡೆ ಮಾಡಲು ಚಾಲನೆ ನೀಡಲಿದ್ದಾರೆ.

ಸ್ತ್ರೀಯ ಸಾಮರ್ಥ್ಯ ಯೋಜನೆಯ 2 ನೇ ಕಂತಿನ ವಿಶೇಷ ಸಮುದಾಯ ಬಂಡವಾಳ ನಿಧಿಯನ್ನು ಎಸ್. ಹೆಚ್. ಜಿ ಫಲಾನುಭವಿಗಳಿಗೆ ಬಿಡುಗಡೆ ಮಾಡಲಿದ್ದಾರೆ.

ಪುಣ್ಯಕೋಟಿ ಮತ್ತು ದತ್ತು ಯೋಜನೆಯಡಿ ಸಂಗ್ರಹಿಸಲಾದ ದೇಣಿಗೆಯನ್ನು ರಾಜ್ಯದಲ್ಲಿರುವ ಗೋಶಾಲೆಗಳಲ್ಲಿನ ಜಾನುವಾರಗಳ ಸಂರಕ್ಷಣೆಗೆ ಬಿಡುಗಡೆ ಮಾಡಲಿದ್ದಾರೆ.