ರೈತ ಸಮುದಾಯಕ್ಕೆ ಗುಡ್ ನ್ಯೂಸ್ : ಶೀಘ್ರವೇ `ಕುಸುಮ್- ಸಿ' ಯೋಜನೆಯಡಿ ಪಂಪ್ ಸೆಟ್ ಗಳಿಗೆ ಸೌರ ವಿದ್ಯುತ್ ಪೂರೈಕೆ

ರೈತ ಸಮುದಾಯಕ್ಕೆ ಗುಡ್ ನ್ಯೂಸ್ : ಶೀಘ್ರವೇ `ಕುಸುಮ್- ಸಿ' ಯೋಜನೆಯಡಿ ಪಂಪ್ ಸೆಟ್ ಗಳಿಗೆ ಸೌರ ವಿದ್ಯುತ್ ಪೂರೈಕೆ

ಬೆಂಗಳೂರು : ರಾಜ್ಯ ಸರ್ಕಾರವು ರೈತ ಸಮುದಾಯಕ್ಕೆ ಮತ್ತೊಂದು ಸಿಹಿಸುದ್ದಿ ನೀಡಿದ್ದು, ಶೀಘ್ರವೇ ಪ್ರಧಾನ ಮಂತ್ರಿ ಕುಸುಮ್ ಸಿ ಯೋಜನೆಯಡಿ 3.37 ಲಕ್ಷ ರೈತರ ಪಂಪ್ ಸೆಟ್ ಗಳಿಗೆ ಸೌರ ವಿದ್ಯುತ್ ಪೂರೈಕೆ ಮಾಡಲಾಗುವುದು ಎಂದು ಇಂಧನ ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ.

ವಿಧಾನಪರಿಷತ್ ನಲ್ಲಿ ಈ ಕುರಿತು ಮಾಹಿತಿ ನೀಡಿದ ಸಚಿವರು, ಪ್ರಧಾನ ಮಂತ್ರಿ ಕುಸುಮ್ ಸಿ ಯೋಜನೆಯಡಿ 3.37 ಲಕ್ಷ ರೈತರ ಪಂಪ್ ಸೆಟ್ ಗಳಿಗೆ 812 ಫೀಡರ್ (ತಲಾ 11 ಕೆವಿ) ಮುಖೇನ ಸೌರ ವಿದ್ಯುತ್ ಪೂರೈಕೆಗೆ ಟೆಂಡರ್ ಪ್ರಕ್ರಿಯೆ ಫೆ. 17 ಕ್ಕೆ ಮುಗಿಯಲಿದ್ದು, ನಂತರ ವಾರದೊಳಗೆ ಕೆಲಸದ ಆದೇಶ ನೀಡಲು ಸರ್ಕಾರ ಬದ್ಧವಾಗಿದೆ ಎಂದರು.

ಪರಿಸರ ಸ್ನೇಹಿ ಹಸಿರು ವಿದ್ಯುತ್ ಉತ್ಪಾದನೆಗೆ ಹೆಚ್ಚಿನ ನೀಡಲಾಗಿದ್ದು, ಕುಸುಮ್ ಸಿ ಯೋಜನೆಯ ವೈಯಕ್ತಿಕ ಕೃಷಿ ಪಂಪ್ ಸೆಟ್ ಗಳಿಗೆ ಜಾಲಮುಕ್ತ ಸೌರ ವಿದ್ಯುತ್ ಪೂರೈಸಲಿದ್ದು, ಅರ್ಹ ಫಲಾನುಭವಿಗಳ ಪೈಕಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಶೇ. 50 ರಷ್ಟು ಇತರಿಗೆ ಶೇ. 30 ರಷ್ಟು ಸಬ್ಸಿಡಿ ಸೌಲಭ್ಯ ಸಿಗಲಿದೆ ಎಂದು ತಿಳಿಸಿದ್ದಾರೆ.