ರಾಷ್ಟ್ರೀಯ ಯುವ ಪಡೆ ಕಾರ್ಯಕರ್ತರ ಆಯ್ಕೆಗಾಗಿ ಅರ್ಜಿ ಆಹ್ವಾನ
ಕೊಪ್ಪಳ : ಭಾರತ ಸರಕಾರದ ನೆಹರು ಯುವ ಕೇಂದ್ರ ಕೊಪ್ಪಳ ವತಿಯಿಂದ ರಾಷ್ಟ್ರೀಯ ಯುವ ಪಡೆ ಕಾರ್ಯಕರ್ತರ ಆಯ್ಕೆಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಏಪ್ರಿಲ್ 3 ಕೊನೆಯ ದಿನವಾಗಿದೆ.
ಅರ್ಜಿಸಲ್ಲಿಸುವ ಅರ್ಹ ಯುವಕ ಯುವತಿಯರು 2023ರ ಏಪ್ರೀಲ್ 1ಕ್ಕೆ 18 ರಿಂದ 29 ವರ್ಷದೋಳಗಿರಬೇಕು.
ಆಯ್ಕೆಯಾದವರಿಗೆ ಮಾಸಿಕ ರೂ. 5000 ಗಳ ಗೌರವ ಧನ ನೀಡಲಾಗುವುದು. ಗ್ರಾಮೀಣ ಯುವ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು. ಯುವ ಸಂಘಗಳನ್ನು ರಚಿಸುವುದು, ಸಾಮಾಜಿಕ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಹಾಗೂ ಇತರೆ ಕೆಲಸಕಾರ್ಯಗಳನ್ನು ನಿರ್ವಹಿಸುವುದಾಗಿದೆ. ಅರ್ಜಿ ನಮೂನೆ ವೆಬ್‌ಸೈಟ್ nyks.nic.in ಮೂಲಕ ಪಡೆಯಬಹುದು ಅಥವಾ ನೆಹರು ಯುವ ಕೇಂದ್ರ ಕೊಪ್ಪಳ ಕಛೇರಿಯಲ್ಲಿಯೂ ಪಡೆಯಬಹುದು. ಆನ್‌ಲೈಲ್ ಮೂಲಕ ಸಲ್ಲಿಸಿದ ಅರ್ಜಿಯ ಪ್ರಿಂಟ ಪ್ರತಿಯನ್ನು ನೆಹರು ಯುವ ಕೇಂದ್ರಕ್ಕೆ ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ಏಪ್ರೀಲ್ 03 ಕೊನೆಯ ದಿನವಾಗಿದ್ದು, ಅರ್ಜಿ ನಮೂನೆ ಹೆಚ್ಚಿನ ಮಾಹಿತಿಗಾಗಿ ಯುವ ಅಧಿಕಾರಿಗಳು, ನೆಹರು ಯುವ ಕೇಂದ್ರ, ಬನ್ನಿಕಟ್ಟಿ, ಗದಗ ರಸ್ತೆ, ಕೊಪ್ಪಳ-583231, ದೂರವಾಣಿ-08539-230116, ಇಲ್ಲಿಗೆ ಸಂಪರ್ಕಿಸಲು ಜಿಲ್ಲಾ ಯುವ ಅಧಿಕಾರಿಗಳಾದ ಮೊಂಟು ಪಾತರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.