ಮೊಟ್ಟೆ ಪ್ರಿಯರಿಗೆ ಬಿಗ್‌ಶಾಕ್ : ದಿಢೀರ್ ಗಗನಕ್ಕೇರಿದ ಮೊಟ್ಟೆ ದರ, 1 ಮೊಟ್ಟೆಗೆ 6.50 ರೂ

ನವದೆಹಲಿ : ಮೊಟ್ಟೆ ಅಂದ್ರೆ ಯಾರಿಗೆ ತಾನೆ ಇಷ್ಟ ಆಗೋದಿಲ್ಲ ಹೇಳಿ..ಅದರಲ್ಲೂಒಬ್ಬೊಬ್ಬರು ಮೊಟ್ಟೆಯನ್ನು ಎಗ್ ರೈಸ್, ಅಮ್ಲೆಟ್, ಎಗ್ ಕರಿ, ಹೀಗೆ ಹತ್ತಾರು ವಿಧಾನಗಳಲ್ಲಿ ತಯಾರಿಸಿ ತಿನ್ನುವುದಕ್ಕೆ ಇಷ್ಟಪಡುತ್ತಾರೆ. ಕೆಲವರು ವ್ಯಾಯಾಮ ಮತ್ತು ಜಿಮ್ ನಲ್ಲಿ ಸರ್ಕಸ್ ಮಾಡುವವರು ಮೊಟ್ಟೆಗಳನ್ನು ಹಸಿಯಾಗಿ ಸೇವನೆ ಮಾಡುತ್ತಾರೆ.
ದಿನದಿಂದ ದಿನಕ್ಕೆ ಮೊಟ್ಟೆ ಬೇಡಿಕೆ ಹೆಚ್ಚುತ್ತಲೇ ಇದೆ. ಹೆಚ್ಚಿದ ಬೇಡಿಕೆಯಿಂದಾಗಿ ಮೊಟ್ಟೆ ಬೆಲೆ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದೆ. ಅದರಂತೆ 5.50 ಪೈಸೆಗೆ ಮಾರಾಟವಾದ ಮೊಟ್ಟೆಯ ಬೆಲೆ 5 ಪೈಸೆಯಿಂದ 5.55 ಪೈಸೆಗೆ ಏರಿಕೆಯಾಗಿದೆ. 40 ವರ್ಷಗಳ ಕೋಳಿ ಸಾಕಾಣಿಕೆಯ ಇತಿಹಾಸದಲ್ಲಿ ಇದು ಗರಿಷ್ಠ ಮೊಟ್ಟೆ ಬೆಲೆಯಾಗಿದೆ. ಈ ಹಿಂದೆ 2 ಮೊಟ್ಟೆಯ ಗರಿಷ್ಠ ಬೆಲೆ 5.50 ಪೈಸೆ ಇತ್ತು. ಮೊಟ್ಟೆ ಚಿಲ್ಲರೆ ದರ 6.50 ರೂ.ಗೆ ಏರಿಕೆಯಾಗಿದೆ.