ಮನೆ ಕಟ್ಟಿಸಿಕೊಡುವಂತೆ ಮಾಜಿ ಸಿಎಂ 'ಹೆಚ್ .ಡಿ.ಕುಮಾರಸ್ವಾಮಿಗೆ ಮನವಿ ಮಾಡಿದ ದಂಪತಿ'

ಕೋಲಾರ : ಜೆಡಿಎಸ್ ನೇತೃತ್ವದ ಪಂಚರತ್ನ ರಥಯಾತ್ರೆ ಆರಂಭಗೊಂಡಿದ್ದು, ಇದೀಗ ಬಂಗಾರಪೇಟೆ ಕ್ಷೇತ್ರಕ್ಕೆ ತಲುಪಿದೆ. ಯಾತ್ರೆಗೆ ಆಗಮಿಸಿದ್ದ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಕ್ರೇನ್ ಮೂಲಕ ಬೃಹತ್ ಸೇಬಿನ ಹಾರ ಹಾಕಿ, ಜೆಸಿಬಿ ಮೂಲಕ ಪುಷ್ಪಾರ್ಚನೆ ಮೂಲಕ ಅದ್ದೂರಿ ಸ್ವಾಗತಿಸಲಾಯಿತು.
ಈ ಸಂದರ್ಭದಲ್ಲಿ ಊರುಕುಂಟೆ ಮಿಟ್ಟೂರಿನ ಹೊರವಲಯದಲ್ಲಿ ಅನೇಕ ವರ್ಷಗಳಿಂದ ಗುಡಿಸಲಿನಲ್ಲಿ ವಾಸಿಸುತ್ತಿರುವ ತಿಮ್ಮಕ್ಕ ದಂಪತಿಗಳು ಹೆಚ್‌ಡಿಕೆ ಅವರನ್ನು ಭೇಟಿಯಾದರು. ಮನೆ ಕಟ್ಟಿಸಿಕೊಡುವಂತೆ ಕೈ ಮುಗಿದು ಮನವಿ ಮಾಡಿಕೊಂಡರು .ಇದಕ್ಕೆ ಪ್ರತಿಯಾಗಿ ಮನೆ ನಿರ್ಮಾಣ ಮಾಡಿಕೊಂಡುವುದಾಗಿ ಭರವಸೆ ನೀಡಿದರು. ಬಳಿಕ ಹೆಚ್‌ಡಿಕೆ ಜೆಡಿಎಸ್ ಅಭ್ಯರ್ಥಿ ಸಮೃದ್ಧಿ ಮಂಜುನಾಥ ಗೆ ಸೂಚನೆ ಕೂಡ ನೀಡಿದ್ದಾರೆ