ಕೋವಿಡ್ ಹೆಚ್ಚಳ; ಚೀನಾಕ್ಕೆ ಜ್ವರದ ಔಷಧ ರಫ್ತಿಗೆ ಸಿದ್ಧ ಎಂದ ಭಾರತ !

ಕೋವಿಡ್ ಹೆಚ್ಚಳ; ಚೀನಾಕ್ಕೆ ಜ್ವರದ ಔಷಧ ರಫ್ತಿಗೆ ಸಿದ್ಧ ಎಂದ ಭಾರತ !

ನವದೆಹಲಿ: ಚೀನಾದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವುದರಿಂದ ಆ ದೇಶಕ್ಕೆ ಜ್ವರದ ಔಷಧಗಳನ್ನು ರಫ್ತು ಮಾಡಲು ಸಿದ್ಧ ಎಂದು ಭಾರತದ ಔಷಧ ರಫ್ತು ಮಂಡಳಿ ತಿಳಿಸಿದೆ. ಚೀನಾದಲ್ಲಿ ಈ ತಿಂಗಳ ಆರಂಭದಲ್ಲಿ ಕೋವಿಡ್ ಪ್ರಕರಣಗಳಲ್ಲಿ ದಿಢೀರ್ ಏರಿಕೆ ಕಂಡಿದ್ದು, ಜ್ವರದ ಔಷಧಗಳಾದ ‘ಐಬ್ರೂಫೇನ್ & ಪ್ಯಾರಸಿಟಮೋಲ್​​ ಔಷಧ ತಯಾರಿಕಾ ಕಂಪನಿಗಳಿಗೆ ಬೇಡಿಕೆ ಹೆಚ್ಚಾಗಿದೆ ಎಂದು ಭಾರತೀಯ ಔಷಧ ರಪ್ತು ಉತ್ತೇಜನಾ ಮಂಡಳಿಯ ಅಧ್ಯಕ್ಷ ಶಾಹಿಲ್ ಮುಂಜಲ್ ರಾಯಿಟರ್ಸ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.