ಮದ್ಯಪಾನಕ್ಕೆ ಹಣ ಕೊಡು ಎಂದು ಪೀಡಿಸುತ್ತಿದ್ದ ಮಗನನ್ನು ಕೊಲೆ ಮಾಡಿದ ತಂದೆ

ಬೆಳಗಾವಿ: ಮದ್ಯಪಾನಕ್ಕೆ ಹಣ ಕೊಡು ಎಂದು ಪೀಡಿಸುತ್ತಿದ್ದ ಮಗನನ್ನು ಅಪ್ಪನೇ ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರ ಬಿಕೆ ಗ್ರಾಮದಲ್ಲಿ ನಡೆದಿದೆ. ಕೊಲೆಯಾದವನ್ನು . ಭರತೇಶ ಜಿನ್ನಪ್ಪಾ ಕಾಂಜಿ (30) ಅಂತ ತಿಳಿದು ಬಂದಿದ್ದು, ಆತನ ತಂದೆ ಜಿನ್ನಪ್ಪಾ ಕಾಂಜಿ ಕೊಲೆ ಮಾಡಿರುವ ಆರೋಪಿಯಾಗಿದ್ದಾರೆ.
ಘಟನೆಗೆ ಕಾರಣ : ಮದ್ಯಪಾನಕ್ಕೆ ಹಣ ಕೊಡು ಎಂದು ಪುತ್ರ ನಿತ್ಯವೂ ತಂದೆಯನ್ನು ಪೀಡಿಸುತ್ತಿದ್ದ ಎನ್ನಲಾಗಿದ್ದು, ಇದರಿಂದ ರೋಸಿ ಹೋದ ಆರೋಪಿ ಜಿನ್ನಪ್ಪಾ ಕಾಂಜಿ ತನ್ನ ಮಗನಿಗೆ ಹರಿತವಾದ ಆಯುಧದಿಂದ ತಲೆಯ ಹಿಂಭಾಗಕ್ಕೆ ಹೊಡೆದಿದ್ದಾನೆ. ಇದರಿಂದ ಆತನ ಪುತ್ರ ಸ್ಥಳದಲ್ಲೇ ಸಾವನ್ನಪ್ಪಿದ್ದನೆ ಎನ್ನಲಾಗಿದೆ. ಘಟನೆಗೆ ಸಂಬಂಧ ಪಟ್ಠಂತೆ ಸ್ಥಳಕ್ಕೆ ಕಾಗವಾಡ ಪೊಲೀಸರು ಭೇಟಿ ನೀಡಿದ್ದು, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.