ಕನಕಪುರದಲ್ಲಿ ತಯಾರಾದ ಕುಕ್ಕರ್ ಗಳು ಡುಪ್ಲಿಕೇಟ್ , ಅವು ಬ್ಲಾಸ್ಟ್ ಆಗುತ್ತೆ' : ರಮೇಶ್ ಜಾರಕಿಹೊಳಿ

ಕನಕಪುರದಲ್ಲಿ ತಯಾರಾದ ಕುಕ್ಕರ್ ಗಳು ಡುಪ್ಲಿಕೇಟ್ , ಅವು ಬ್ಲಾಸ್ಟ್ ಆಗುತ್ತೆ' : ರಮೇಶ್ ಜಾರಕಿಹೊಳಿ

ಬೆಳಗಾವಿ : ಕನಕಪುರದಲ್ಲಿ ತಯಾರಾದ ಕುಕ್ಕರ್ ಗಳು ಭಾರೀ ಕಳಪೆಯಿಂದ ಕೂಡಿದೆ, ಅವು ಬ್ಲಾಸ್ಟ್ ಆಗುತ್ತದೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ವ್ಯಂಗ್ಯವಾಡಿದ್ದಾರೆ.

ಬೆಳಗಾವಿ ಗ್ರಾಮೀಣ ಕ್ಷೇತ್ರದ ಉಚಗಾಂವ ಗ್ರಾಮದಲ್ಲಿ ಶ್ರೀ ಮಳೆಕರಣಿ ದೇವಿ ಉತ್ಸವ ಕಾರ್ಯಕ್ರಮದಲ್ಲಿ ಲಕ್ಷ್ಮೀ ಹೆಬ್ಬಾಳ ಹಾಗೂ ಡಿ.ಕೆ.ಶಿವಕುಮಾರ್ ವಿರುದ್ಧ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಾಗ್ಧಾಳಿ ನಡೆಸಿದ್ದಾರೆ.

ಕನಕಪುರ ಕಾರ್ಖಾನೆಯಲ್ಲಿ ನಿರ್ಮಾಣವಾಗಿರುವ ಕುಕ್ಕರ್ ಕಳಪೆ. ಕನಕಪುರದಲ್ಲಿ ನಕಲಿ ಪ್ರಾಡಕ್ಟ್ ತಯಾರಾಗುತ್ತವೆ. ನೀವು ಎಚ್ಚರಿಕೆಯಿಂದ ಇರಿ ಎಂದು ಲಕ್ಷ್ಮೀ ಹೆಬ್ಬಾಳ ಹಾಗೂ ಡಿ.ಕೆ.ಶಿವಕುಮಾರ್ ಟೀಕಾಪ್ರಹಾರ ನಡೆಸಿದ್ದಾರೆ. ಬೆಂಗಳೂರಿನ ಕಾಂಗ್ರೆಸ್ನ ಅಭ್ಯರ್ಥಿಯೊಬ್ಬರು ಇದೇ ರೀತಿ ಕುಕ್ಕರ್ ಕೊಟ್ಟಿದ್ರು, ಅದರಲ್ಲಿ 14 ಕುಕ್ಕರ್ಗಳು ಬ್ಲಾಸ್ಟ್ ಆಗಿ ಹಾನಿ ಸಂಭವಿಸಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಧ್ಯಮದಲ್ಲಿ ಬಂದಿದೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು.ಅವರು ಏನೇ ಮಾಡಿದ್ರೂ, ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲುವುದು ಫಿಕ್ಸ್.ಜನರನ್ನು ಮರಳು ಮಾಡಲು ಆಗಲ್ಲ. ಹಣ ಇದೆ ಎಂದು ತುಂಬಾ ದಿನ ನಡೆಯುವುದಿಲ್ಲ, ಜನರ ಸೇವೆ ಮಾಡಿದರೆ ಕೊನೆವರೆಗೆ ಉಳಿಯುತ್ತಾರೆ ಎಂದರು.