ಮಣಿಪುರದಲ್ಲಿ ಕರ್ತವ್ಯದಲ್ಲಿದ್ದ ಶಿವಮೊಗ್ಗದ ಯೋಧ ಸಾವು, ಕಾರಣ ನಿಗೂಢ

ಶಿವಮೊಗ್ಗ: ಮಣಿಪುರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಶಿವಮೊಗ್ಗದ ಯೋಧರೊಬ್ಬರು ಸಾವನ್ನಪ್ಪಿರುವುದಾಗಿ ವರದಿಯಾಗಿದೆ.
ಮೃತನನ್ನು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆಯ ನಿವಾಸಿ ಸಂದೀಪ್(27) ಎಮದು ಗುರುತಿಸಲಾಗಿದೆ.
ಸಂದೀಪ್ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಆದ್ರೆ, ಆತನ ಸಾವಿಗೆ ಕಾರಣ ಏನೆಂಬುದು ಇನ್ನೂ ತಿಳಿದುಬಂದಿಲ್ಲ. ಇತ್ತೀಚೆಗೆ ರಜೆ ಪಡೆದು ಊರಿಗೆ ಬಂದಿದ್ದ ಸಂದೀಪ್ ಫೆ.19ರಂದು ಕರ್ತವ್ಯಕ್ಕಾಗಿ ವಾಪಸ್ ಆಗಿದ್ದರು