ಮಡಿದ ಹೆತ್ತವರಿಗಾಗಿ ಹೊಲದಲ್ಲಿ ದೇಗುಲ ನಿರ್ಮಿಸಿದ ಪುತ್ರ

ಮಡಿದ ಹೆತ್ತವರಿಗಾಗಿ ಹೊಲದಲ್ಲಿ ದೇಗುಲ ನಿರ್ಮಿಸಿದ ಪುತ್ರ

ಬಾಗಲಕೋಟೆ: ತಾ|ನ ಸೀಗಿಕೇರಿ ಗ್ರಾಮದ ನಾಟಕಕಾರ, ಕಲಾವಿದ ಹೆಚ್‌.ಎನ್‌‌.ಶೇಬನ್ನ ಎಂಬವರು ತಮ್ಮ ತಂದೆ-ತಾಯಿಗಾಗಿ ದೇಗುಲ ಕಟ್ಟಿಸಿದ್ದಾರೆ. ತಮ್ಮ ಹೊಲದಲ್ಲಿರುವ ಅವರ ಗದ್ದುಗೆಗಳನ್ನೇ ಮೂರ್ತಿ ಮಾಡಿ ದೇವಾಲಯ ಕಟ್ಟಿಸಿದ್ದಾರೆ. ಅವರ ನೆನಪು ಮಾಸಬಾರದು ಎಂದು ಪ್ರತಿವರ್ಷ ಜನಪದ ಜಾತ್ರೆ ಮಾಡಿದ್ದಾರೆ. ಜನಪದ ಜಾತ್ರೆಯಲ್ಲಿ ಸಾಧಕರಿಗೆ ರಾಜ್ಯಮಟ್ಟದ ಶಂಕರಶ್ರೀ ಪ್ರಶಸ್ತಿ ವಿತರಿಸಿದರು. ಜನಪದ ಜಾತ್ರೆ ಹಿನ್ನೆಲೆ ವಿವಿಧ ಕಲಾವಿದರಿಂದ ಜನಪದ ಹಾಡುಗಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.