ಮಂಗಳೂರು: ಗರಡಿ ಉತ್ಸವ ಮಾದರಿಯಾಗಿಸೋಣ- ವೇದವ್ಯಾಸ ಕಾಮತ್

ಮಂಗಳೂರು: ಗರಡಿ ಉತ್ಸವ ಮಾದರಿಯಾಗಿಸೋಣ- ವೇದವ್ಯಾಸ ಕಾಮತ್

ಮಂಗಳೂರು: ತುಳುನಾಡಿನ ಕಾರಣೀಕ ಸಾನಿದ್ಯವಾದ ಕಂಕನಾಡಿ ಗರಡಿ ಬ್ರಹ್ಮಬೈದರ್ಕಳ ಕ್ಷೇತ್ರದ 150ನೇ ಸಂಭ್ರಮದ ಯಶಸ್ಸಿಗೆ ಜಿಲ್ಲಾಡಳಿತದ ಸಂಪೂರ್ಣ ಸಹಕಾರ ಅಗತ್ಯವಿದ್ದು, ಈ ಉತ್ಸವವನ್ನು ನಾವೆಲ್ಲ ಸವಾಲಾಗಿ ಸ್ವೀಕರಿಸಿ ಮಾದರಿ ಕಾರ್ಯಕ್ರಮವಾಗಿಸೋಣ ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಹೇಳಿದರು.

ಕಂಕನಾಡಿ ಗರಡಿಯಲ್ಲಿ ಬುಧವಾರ ಸಂಜೆ ಆಡಳಿತ ಮಂಡಳಿ, ಜಿಲ್ಲಾಡಳಿತ, ಮನಪಾ, ಪೊಲೀಸ್ ಇಲಾಖೆ ಸೇರಿದಂತೆ ಇತರ ಇಲಾಖಾ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಉತ್ಸವ ಹಿನ್ನಲೆಯಲ್ಲಿ ಸ್ಮಾರ್ಟ್ ಸಿಟಿ ರಸ್ತೆ ಕಾಮಗಾರಿ, ಪೊಲೀಸ್ ಇಲಾಖೆಯಿಂದ ಟ್ರಾಫಿಕ್ ವ್ಯವಸ್ಥೆ, ಪರ್ಯಾಯ ಸಂಚಾರ ವ್ಯವಸ್ಥೆ, ಸಿಸಿ ಕ್ಯಾಮೆರಾ ಅಳವಡಿಕೆ, ಆರೋಗ್ಯ ಇಲಾಖೆಯಿಂದ ಪ್ರಥಮ ಚಿಕಿತ್ಸೆ, ಅಂಬುಲೆನ್ಸ್ ವ್ಯವಸ್ಥೆ, ಶುಚಿತ್ವ ವ್ಯವಸ್ಥೆ, ಮೆಸ್ಕಾಂನಿಂದ ವಿದ್ಯುತ್ ಕಂಬಗಳ ಶಿಪ್ಟ್ ಸೇರಿದಂತೆ ಇತರ ವ್ಯವಸ್ಥೆ, ಅಗ್ನಿಶಾಮಕ ದಳದಿಂದ ಪಡೆ ನಿಯೋಜನೆ ಸೇರಿದಂತೆ ಇತರ ವ್ಯವಸ್ಥೆ ಗಳ ಬಗ್ಗೆ ನಿರ್ದೇಶನ ನೀಡಿದರು.

ಈ ಸಂದರ್ಭ ಮಂಗಳೂರು ಮೇಯರ್ ಜಯಾನಂದ ಅಂಚನ್, ಉಪಮೇಯರ್ ಪೂರ್ಣಿಮಾ,‌ ಮನಪಾ ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಡಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಕಿಶೋರ್ ಕೊಟ್ಟಾರಿ, ಶಕೀಲಾ‌ ಕಾವ, ಕಾರ್ಪೊರೇಟರ್ ಗಳಾದ ಸಂದೀಪ್ ಗರೋಡಿ, ವೀಣಾ ಮಂಗಳ, ಚಂದ್ರಾವತಿ ವಿಶ್ವನಾಥ್, ಪ್ರವೀಣ್ ಚಂದ್ರ ಆಳ್ವ, ಮಂಗಳೂರು ಮಹಾನಗರಪಾಲಿಕೆ ಆಯುಕ್ತ ಚನ್ನಬಸಪ್ಪ, ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಮಂಗಳೂರು ನಗರ ಸಂಚಾರ‌ ಮತ್ತು ಅಪರಾಧ ವಿಭಾಗ ಡಿಸಿಪಿ ದಿನೇಶ್ ಕುಮಾರ್, ನಗರ ಸಂಚಾರ ವಿಭಾಗದ ಎಸಿಪಿ ಗೀತಾ ಕುಲಕರ್ಣಿ, ಸ್ಮಾರ್ಟ್ ಸಿಟಿ ಮುಖ್ಯಸ್ಥ ಅರುಣ್ ಪ್ರಭಾ, ಆರೋಗ್ಯ ಅಧಿಕಾರಿ, ಉಪದಂಡಾಧಿಕಾರಿ ರಾಜು, ಮಂಗಳೂರು ತಹಸೀಲ್ದಾರ್ ಪ್ರಶಾಂತ್ ಪಾಟೀಲ್, ಮಂಗಳೂರು ದಕ್ಷಿಣ ಉಪವಿಭಾಗ ಎಸಿಪಿ ಧನ್ಯಾ ನಾಯಕ್, ಕಂಕನಾಡಿ ಗರಡಿ ಕ್ಷೇತ್ರದ ಅಧ್ಯಕ್ಷ ಚಿತ್ತರಂಜನ್ ಕೆ., ಗರಡಿ ಉತ್ಸವದ ಅಧ್ಯಕ್ಷ ಮೋಹನ್ ಉಜ್ಜೋಡಿ, ಮೊಕ್ತೇಸರರಾದ ಕಿಶೋರ್, ದಿನೇಶ್ ಅಂಚನ್, ಆರ್ಥಿಕ ಸಮಿತಿ ಸಂಚಾಲಕ ಶರಣ್ ಪಂಪ್ ವೆಲ್ ಉಪಸ್ಥಿತರಿದ್ದರು.