ಭಾರತದ ಜಿ-20 ಅಧ್ಯಕ್ಷತೆ ಯಶಸ್ವಿಯಾಗುವ ನಿಟ್ಟಿನಲ್ಲಿ ಭಾರತದ ಕೆಲಸಗಳನ್ನು ಎಲ್ಲಾ ರೀತಿಯಲ್ಲೂ ಬೆಂಬಲಿಸಲು ಎದುರು ನೋಡುತ್ತಿರುವುದಾಗಿ ಅಮೇರಿಕ ಹೇಳಿದೆ. ನವದೆಹಲಿ: ಭಾರತದ ಜಿ-20 ಅಧ್ಯಕ್ಷತೆ ಯಶಸ್ವಿಯಾಗುವ ನಿಟ್ಟಿನಲ್ಲಿ ಭಾರತದ ಕೆಲಸಗಳನ್ನು ಎಲ್ಲಾ ರೀತಿಯಲ್ಲೂ ಬೆಂಬಲಿಸಲು ಎದುರು ನೋಡುತ್ತಿರುವುದಾಗಿ ಅಮೇರಿಕ ಹೇಳಿದೆ.
ಅಮೇರಿಕ ಸಚಿವ ಆಂಟೋನಿ ಬ್ಲಿಂಕನ್ ಮುಂದಿನ ವಾರ ನವದೆಹಲಿಯಲ್ಲಿ ನಡೆಯಲಿರುವ ವಿದೇಶಾಂಗ ಸಚಿವರ ಸಭೆಯಲ್ಲಿ ಬ್ಲಿಂಕನ್ ಭಾಗಿಯಾಗುತ್ತಿದ್ದಾರೆ. ಇದಷ್ಟೇ ಅಲ್ಲದೇ ಕ್ವಾಡ್ ಕೂಟದ ವಿದೇಶಾಂಗ ಸಚಿವರ ಸಭೆಯಲ್ಲೂ ಬ್ಲಿಂಕನ್ ಭಾಗವಹಿಸುತ್ತಿದ್ದು, ನವದೆಹಲಿಯಲ್ಲಿ ವಿದೇಶಾಂಗ ಸಚಿವ ಜೈಶಂಕರ್ ಅವರೊಂದಿಗೂ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ. ಭಾರತ ಡಿ.1, 2022 ರಂದು ಜಿ-20 ಅಧ್ಯಕ್ಷತೆಯನ್ನು ವಹಿಸಿಕೊಂಡಿತ್ತು. ಅಮೇರಿಕಾದ ವಿದೇಶಾಂಗ ಸಚಿವರು ಮಾ.1 ರಿಂದ 3 ವರೆಗೆ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ.
ಭಾರತದ-20 ಅಧ್ಯಕ್ಷತೆಯ ವರ್ಷದ ಹಿನ್ನೆಲೆಯಲ್ಲಿ ಬ್ಲಿಂಕನ್ ದೆಹಲಿಗೆ ಭೇಟಿ ನೀಡುವುದನ್ನು ಎದುರುನೋಡುತ್ತಿದ್ದಾರೆ. ಭಾರತದ ಅಧ್ಯಕ್ಷತೆ ಯಶಸ್ವಿಯಾಗುವುದಕ್ಕೆ ಅಗತ್ಯವಿರುವ ಎಲ್ಲವನ್ನೂ ಮಾಡಲು ನಾವು ಎದುರುನೋಡುತ್ತಿದ್ದೇವೆ ಎಂದು ಅಮೇರಿಕಾದ ಆರ್ಥಿಕ ಹಾಗೂ ಉದ್ಯಮ ವ್ಯವಹಾರಗಳ ಸಹಾಯಕ ಕಾರ್ಯದರ್ಶಿ ರಾಮಿನ್ ಟೊಲೌಯಿ ಹೇಳಿದ್ದಾರೆ. "ಸಾಮಾನ್ಯ ಸವಾಲುಗಳ ಕೊರತೆಯಿಲ್ಲ, ಮತ್ತು ಈ ಸವಾಲುಗಳನ್ನು ಎದುರಿಸಲು ಇತರ G20 ದೇಶಗಳೊಂದಿಗೆ ನಮ್ಮ ಪಾಲುದಾರಿಕೆಯನ್ನು ಗಾಢವಾಗಿಸಲು ನಾವು ಬಯಸುತ್ತೇವೆ" ಎಂದು ಟೊಲೌಯಿ ಹೇಳಿದ್ದಾರೆ.