ಬೆಂಗಳೂರಿನಲ್ಲಿನ ರಕ್ಷಣಾ ಇಲಾಖೆಯ ಜಮೀನನ್ನು BBMPಗೆ ವರ್ಗಾಯಿಸುವಂತೆ ಸಂಸತ್ತಿನಲ್ಲಿ ಮನವಿ

ಬೆಂಗಳೂರಿನಲ್ಲಿನ ರಕ್ಷಣಾ ಇಲಾಖೆಯ ಮಾಲಿಕತ್ವದಲ್ಲಿರುವ ಜಮೀನನ್ನು ಬಿಬಿಎಂಪಿಗೆ ವರ್ಗಾಯಿಸುವಂತೆ ಕೇಂದ್ರ ಸಂಸದ ಪಿ.ಸಿ.ಮೋಹನ್, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಮನವಿ ಮಾಡಿದ್ದಾರೆ. ರಾಜ್ಯ ರಾಜಧಾನಿ ಪ್ರತಿದಿನ ತನ್ನ ವಿಸ್ತೀರಣವನ್ನು ಹೆಚ್ಚಿಸಿಕೊಳ್ಳುತ್ತಿದೆ. ದೇಶದ ವಿವಿಧ ನಗರಗಳಿಂದ ಜನರು ಬಂದು ಇಲ್ಲಿ ವಾಸಿಸುತ್ತಿದ್ದಾರೆ. ಇದರಿಂದ ಜನಸಂಖ್ಯೆ ಜಾಸ್ತಿಯಾಗುತ್ತಿದೆ. ಆದರೆ ಇದಕ್ಕೆ ತಕ್ಕ ಹಾಗೆ ಮೂಲಭೂತ ಸೌಕರ್ಯ ಒದಗಿಸಲು ಸರ್ಕಾರ ಮತ್ತು ಬಿಬಿಎಂಪಿ ಹೆಣಗಾಡುತ್ತಿದೆ ಎಂದು ಅಸಮಾಧಾನ ಹೊರ ಹಾಕಿದರು.