ಬುಧವಾರದ ರಾಶಿಫಲ: ಈ ರಾಶಿ ಅವರಿಗಿಂದು ಉದ್ಯೋಗ ವ್ಯವಹಾರಗಳಲ್ಲಿ ಪ್ರಯತ್ನಕ್ಕೆ ತಕ್ಕ ಪ್ರತಿಫ‌ಲ ದೊರೆಯಲಿದೆ

ಬುಧವಾರದ ರಾಶಿಫಲ: ಈ ರಾಶಿ ಅವರಿಗಿಂದು ಉದ್ಯೋಗ ವ್ಯವಹಾರಗಳಲ್ಲಿ ಪ್ರಯತ್ನಕ್ಕೆ ತಕ್ಕ ಪ್ರತಿಫ‌ಲ ದೊರೆಯಲಿದೆ

ಮೇಷ: ಅಧಿಕ ಹಠ ಮಾಡದೇ ಸಹನೆ ಪರಸ್ಪರ ಸಹಕಾರದಿಂದ ಕಾರ್ಯಪ್ರವೃತ್ತರಾದರೆ ಯಶಸ್ಸು ಲಭಿಸಲಿದೆ. ಆರೋಗ್ಯ ಗಮನಿಸಿ. ಹಣಕಾಸಿನ ವಿಚಾರದಲ್ಲಿ ಪ್ರಗತಿ. ಉದ್ಯೋಗ ವ್ಯವಹಾರದಲ್ಲಿ ಪ್ರಾಮಾಣಿಕತೆಯ ಪ್ರದರ್ಶನದಿಂದ ಪ್ರೋತ್ಸಾಹ. ದಾಂಪತ್ಯ ತೃಪ್ತಿದಾಯಕ.

ವೃಷಭ: ಆರೋಗ್ಯ ಸುದೃಢ. ಗೌರವ ಸ್ಥಾನಮಾನಾಧಿಗಳ ವೃದ್ಧಿ. ಜನಮನ್ನಣೆ. ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರೀಯತೆ. ದೀರ್ಘ‌ ಪ್ರಯಾಣ. ದೇಶ ವಿದೇಶಗಳ ವ್ಯವಹಾರಗಳಲ್ಲಿ ಅಭಿವೃದ್ಧಿ. ಬಂಧುಮಿತ್ರರ ಭೇಟಿಯಿಂದ ಮಾನಸಿಕ ನೆಮ್ಮದಿ.

ಮಿಥುನ: ಸಂಶೋಧಕರಿಗೆ, ಆಳವಾದ ಅಧ್ಯಯನ ಪ್ರವೃತ್ತರಿಗೆ ಅನುಕೂಲಕರ ದಿನ. ಆರೋಗ್ಯ ಬಗ್ಗೆ ಗಮನಹರಿಸಿ. ಅತೀ ದೇಹಾಯಾಸ ಸಂಭವ. ದೂರದ ಮಿತ್ರರ ಭೇಟಿ. ದಾಂಪತ್ಯದಲ್ಲಿ ಅನುರಾಗ ವೃದ್ಧಿ. ಗುರುಹಿರಿಯರ ಮಾರ್ಗದರ್ಶನದ ಲಾಭ.

ಕರ್ಕ: ಪರರಿಗೆ ಉಪಕಾರ ಮಾಡಲು ಹೋಗಿ ತೊಂದರೆ ಆಹ್ವಾನಿಸದಿರಿ. ಪಾರದರ್ಶಕ ಸ್ಪಷ್ಟತೆಯೊಂದಿಗೆ ವ್ಯವಹರಿಸಿ. ಉದ್ಯೋಗ ವ್ಯವಹಾರಗಳಲ್ಲಿ ಪ್ರಯತ್ನಕ್ಕೆ ತಕ್ಕ ಪ್ರತಿಫ‌ಲ ದೊರೆಯಲಿದೆ. ಮಾತೃ ಸಮಾನರಿಂದ ಪ್ರೋತ್ಸಾಹ. ಸಹಾಯ ಲಭ್ಯ. ಗೃಹದಲ್ಲಿ ಸಂತಸ.

ಸಿಂಹ: ಆರೋಗ್ಯದ ಬಗ್ಗೆ ಗಣನೀಯ ಎಚ್ಚರ ಅಗತ್ಯ. ಆಹಾರ ಸೇವನೆಯಲ್ಲಿ ಮುಂಜಾಗ್ರತೆ ವಹಿಸಿರಿ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ. ದಂಪತಿಗಳಲ್ಲಿ ಪರಸ್ಪರ ಸಹಕಾರ. ವಿದ್ಯಾರ್ಥಿಗಳಿಗೆ ಅನುಕೂಲಕರ ಪರಿಸ್ಥಿತಿ. ದೇವತಾ ಪ್ರಾರ್ಥನೆಯಿಂದ ನೆಮ್ಮದಿ.

ಕನ್ಯಾ: ಆರೋಗ್ಯ ವೃದ್ಧಿ. ಗೃಹೋಪಯೋಗಿ ವಸ್ತುಗಳ ಸಂಗ್ರಹ. ಬಂಧುಮಿತ್ರರ ಸಮಾಗಮ. ಆಸ್ತಿ ಸಂಚಯನಕ್ಕೆ ಆದ್ಯತೆ. ಹೂಡಿಕೆಗಳಲ್ಲಿ ಲಾಭ. ದಂಪತಿಗಳಲ್ಲಿ ಪರಸ್ಪರ ಅನುರಾಗ ವೃದ್ಧಿ. ಮಕ್ಕಳಿಂದ ಸಂತೋಷದ ವಾರ್ತೆ. ವ್ಯವಹಾರಗಳಲ್ಲಿ ಗೌರವ ಪ್ರಾಪ್ತಿ.

ತುಲಾ: ಮನೋರಂಜನೆಯಿಂದ ಕೂಡಿದ ದಿನ. ಅವಿವಾಹಿತರಿಗೆ ವಿವಾಹ ಭಾಗ್ಯ. ದೂರ ಪ್ರಯಾಣ ಸಂಭವ. ಆಸ್ತಿ ಹೂಡಿಕೆ ವ್ಯವಹಾರದಲ್ಲಿ ಪ್ರಗತಿ. ನಿರೀಕ್ಷಿತ ಧನ ಸಂಚಯನ. ದೇವತಾ ಕಾರ್ಯಗಳಲ್ಲಿ ತೊಡಗುವಿಕೆ.

ವೃಶ್ಚಿಕ: ತಾಳ್ಮೆ ಸಹನೆಯಿಂದ ವ್ಯವಹರಿಸಿದರೆ ಅಧಿಕ ಸ್ಥಾನ ಗೌರವಾದಿ ಲಭ್ಯ. ಹೆಚ್ಚಿದ ವರಮಾನ. ವಿದ್ಯಾರ್ಥಿಗಳಿಗೆ ಸಾಧನೆ ಮಾಡಲು ಅನುಕೂಲಕರ ವಾತಾವರಣ ಲಭಿಸುವುದು. ಜನಮನ್ನಣೆ ಪ್ರೋತ್ಸಾಹ ಲಭ್ಯ. ಅವಿವಾಹಿತರಿಗೆ ಯೋಗ್ಯ ನೆಂಟಸ್ಥಿಕೆ ಸಿಗುವ ಅವಕಾಶ.

ಧನು: ದೂರ ಪ್ರಯಾಣ. ಹೂಡಿಕೆಯಲ್ಲಿ ಆಸಕ್ತಿ. ಉದ್ಯೋಗ ವ್ಯವಹಾರಗಳಲ್ಲಿ ಹೆಚ್ಚಿದ ಜವಾಬ್ದಾರಿ. ದಂಪತಿಗಳಲ್ಲಿ ಅನುರಾಗ ವೃದ್ಧಿ. ಸಂದಭೋìಚಿತವಾಗಿ ವ್ಯವಹರಿಸುವುದರಿಂದ ಜನಮನ್ನಣೆ. ಪ್ರೀತಿ ಸಂಪಾದನೆ. ಗುರುಹಿರಿಯರ ಪ್ರೋತ್ಸಾಹ.

ಮಕರ: ಆರೋಗ್ಯ ವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ಪರಿಶ್ರಮಕ್ಕೆ ತಕ್ಕ ಪ್ರತಿಫ‌ಲ ಲಭಿಸಿದ್ದರಿಂದ ಮನಃ ತೃಪ್ತಿ. ಪಾಲುಗಾರಿಕಾ ವ್ಯವಹಾರಗಳಲ್ಲಿ ಸಾಮಾನ್ಯ ಪ್ರಗತಿ. ಬಂಧುಮಿತ್ರರ ಸಹಕಾರ. ಗೃಹದಲ್ಲಿ ಸಂಭ್ರಮದ ವಾತಾವರಣ.

ಕುಂಭ: ದೂರ ಪ್ರಯಾಣ. ಆಸ್ತಿ ವಿಚಾರಗಳಲ್ಲಿ ಹೂಡಿಕೆ ಪ್ರಗತಿ. ಉತ್ತಮ ಧನ ಸಂಪಾದನೆ. ಸಂದರ್ಭಕ್ಕೆ ಸರಿಯಾಗಿ ವಾಕ್‌ ಚತುರತೆ. ಕೈಗೂಡಿದ ಕೆಲಸ ಕಾರ್ಯಗಳು, ಸಹೋದರ ಸಮಾನರಿಂದ ಸಹಾಯ ಸಹಕಾರ ಲಭ್ಯ. ಮಕ್ಕಳಿಂದ ಸಂತೋಷ ವೃದ್ಧಿ.

ಮೀನ: ಆರೋಗ್ಯ ಸುದೃಢ. ಸಮಾಜಮುಖಿ ಕೆಲಸ ಕಾರ್ಯಗಳಲ್ಲಿ ಭಾಗಿಯಾದ ಸಂತೋಷ. ಜನಮನ್ನಣೆ. ವಾಹನಾದಿ ಸೌಕರ್ಯ ಪ್ರಾಪ್ತಿ. ಧಾರ್ಮಿಕ ವಿಚಾರದಲ್ಲಿ ಆಸಕ್ತಿ. ದೇವತಾ ಕಾರ್ಯಗಳನ್ನು ನೆರವೇರಿಸಿದ ತೃಪ್ತಿ. ಗೃಹದಲ್ಲಿ ಸಂಭ್ರಮದ ವಾತಾವರಣ.