ಬಿಜೆಪಿ' ತ್ರಿಪುರಾವನ್ನು ಭಯ ಮತ್ತು ಹಿಂಸಾಚಾರದಿಂದ ಮುಕ್ತಗೊಳಿಸಿದೆ : ಪ್ರಧಾನಿ ಮೋದಿ

ಬಿಜೆಪಿ' ತ್ರಿಪುರಾವನ್ನು ಭಯ ಮತ್ತು ಹಿಂಸಾಚಾರದಿಂದ ಮುಕ್ತಗೊಳಿಸಿದೆ : ಪ್ರಧಾನಿ ಮೋದಿ

ತ್ರಿಪುರಾ : ಇಂದು ಪ್ರಧಾನಿ ನರೇಂದ್ರ ಮೋದಿಯವರು ತ್ರಿಪುರಾಕ್ಕೆ ಭೇಟಿ ನೀಡಿದ್ದು, ಈ ವೇಳೆ ಹಿಂದಿನ ಆಡಳಿತ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು. ಬಿಜೆಪಿ ರಾಜ್ಯವನ್ನು ಭಯ ಮತ್ತು ಹಿಂಸಾಚಾರದಿಂದ ಮುಕ್ತಗೊಳಿಸಿದೆ ಎಂದು ಹೇಳಿದ್ದಾರೆ.

ಧಲೈ ಜಿಲ್ಲೆಯ ಅಂಬಾಸಾದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ದಶಕಗಳ ಕಾಲ ಕಾಂಗ್ರೆಸ್ ಮತ್ತು ಕಮ್ಯುನಿಸ್ಟರ ಆಡಳಿತವು ತ್ರಿಪುರಾದ ಅಭಿವೃದ್ಧಿಗೆ ಅಡ್ಡಿಯಾಯಿತು. ಬಿಜೆಪಿ ಸರ್ಕಾರವು ತ್ರಿಪುರಾದಲ್ಲಿ ಅಭಿವೃದ್ಧಿ ತಂದಿತು. ಹಿಂಸಾಚಾರವು ತ್ರಿಪುರದ ಗುರುತಾಗಿಲ್ಲ. ಬಿಜೆಪಿ ರಾಜ್ಯವನ್ನು ಭಯ ಮತ್ತು ಹಿಂಸಾಚಾರದಿಂದ ಮುಕ್ತಗೊಳಿಸಿದೆ ಎಂದೇಳಿದ್ದಾರೆ.

ಈ ಹಿಂದೆ ತ್ರಿಪುರಾದಲ್ಲಿ ಪೊಲೀಸ್ ಠಾಣೆಗಳನ್ನು ಸಿಪಿಎಂ ಕಾರ್ಯಕರ್ತರು ವಶಪಡಿಸಿಕೊಂಡಿದ್ದರು. ಆದರೆ ಈಗ ಬಿಜೆಪಿ ಆಡಳಿತದಲ್ಲಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಜಾರಿಯಲ್ಲಿದೆ ಎಂದು ಹೇಳಿದ್ದಾರೆ.

ಚುನಾವಣಾ ಕಣದಲ್ಲಿರುವ ರಾಜ್ಯದಲ್ಲಿ ಮಹಿಳಾ ಸಬಲೀಕರಣದ ಕುರಿತು ಮಾತನಾಡಿದ ಅವರು, ಈಗ, ರಾಜ್ಯದಲ್ಲಿ ಮಹಿಳಾ ಸಬಲೀಕರಣವಿದೆ. ಬದುಕಲು ಸುಲಭವಾಗಿದೆ ಎಂದು ಹೇಳಿದ್ದಾರೆ.

ಬಿಜೆಪಿ ಆಡಳಿತದಲ್ಲಿ ರಾಜ್ಯದ ಅಭಿವೃದ್ಧಿಯನ್ನು ಶ್ಲಾಘಿಸಿದ ಪ್ರಧಾನಿ, ತ್ರಿಪುರಾದಲ್ಲಿ ಹಳ್ಳಿಗಳನ್ನು ಸಂಪರ್ಕಿಸಲು 5,000 ಕಿಮೀ ರಸ್ತೆಗಳನ್ನು ನಿರ್ಮಿಸಲಾಗಿದೆ. ಅಗರ್ತಲಾದಲ್ಲಿ ಹೊಸ ವಿಮಾನ ನಿಲ್ದಾಣವನ್ನು ಸಹ ನಿರ್ಮಿಸಲಾಗಿದೆ. ಹಳ್ಳಿಗಳಿಗೆ ಆಪ್ಟಿಕಲ್ ಫೈಬರ್ ಮತ್ತು 4 ಜಿ ಸಂಪರ್ಕವನ್ನು ತರಲಾಗುತ್ತಿದೆ. ಈಗ ತ್ರಿಪುರ ಜಾಗತಿಕವಾಗುತ್ತಿದ್ದು, ನಾವು ಈಶಾನ್ಯ ಮತ್ತು ತ್ರಿಪುರವನ್ನು ಬಂದರುಗಳೊಂದಿಗೆ ಸಂಪರ್ಕಿಸಲು ಜಲಮಾರ್ಗಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ ಎಂದೇಳಿದ್ದಾರೆ.

ಬಿಜೆಪಿ 55, ಐಪಿಎಫ್‌ಟಿಗೆ 5 ಸ್ಥಾನ

ಬಿಜೆಪಿ 55 ವಿಧಾನಸಭಾ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದು, ಉಳಿದ ಐದು ಸ್ಥಾನಗಳನ್ನು ತನ್ನ ಮೈತ್ರಿಕೂಟದ ಇಂಡಿಜಿನಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರ (ಐಪಿಎಫ್‌ಟಿ) ಗೆ ಬಿಟ್ಟುಕೊಟ್ಟಿದೆ. ಎಡ-ಕಾಂಗ್ರೆಸ್ ಮೈತ್ರಿಕೂಟ ಕೂಡ ಎಲ್ಲಾ 60 ಸ್ಥಾನಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ.

ಚುನಾವಣಾ ಪ್ರಚಾರ

ರಾಜ್ಯದಲ್ಲಿ ಚುನಾವಣಾ ಪ್ರಚಾರ ಆರಂಭಿಸಿದ ಪ್ರಧಾನಿ ಮೋದಿ, ಬಿಜೆಪಿ ಸರ್ಕಾರವು ತ್ರಿಪುರಾದಲ್ಲಿ ಜನರ ಆದಾಯವನ್ನು ಹೆಚ್ಚಿಸುವತ್ತ ಗಮನಹರಿಸುತ್ತಿದೆ. ಪಿಎಂ-ಕಿಸಾನ್ ಅಡಿಯಲ್ಲಿ ರೈತರ ಬ್ಯಾಂಕ್ ಖಾತೆಗಳಿಗೆ ಹಣವನ್ನು ವರ್ಗಾಯಿಸಲಾಗಿದೆ. ಬಿಜೆಪಿ ಒಮ್ಮೆ ಈ ಮೊತ್ತವನ್ನು ಹೆಚ್ಚಿಸಲಾಗುವುದು. ಮತ್ತೆ ಅಧಿಕಾರಕ್ಕೆ ಬರುತ್ತದೆ, ನಮ್ಮ ಆಡಳಿತದಲ್ಲಿ ರೈತರು ಎಂಎಸ್‌ಪಿ (ಕನಿಷ್ಠ ಬೆಂಬಲ ಬೆಲೆ) ಲಾಭವನ್ನು ಪಡೆಯುತ್ತಿದ್ದಾರೆ.

ತ್ರಿಪುರಾ ಚುನಾವಣೆ

ಫೆ. 16 ರಂದು ತ್ರಿಪುರಾದಲ್ಲಿ 60 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಮೇಘಾಲಯ ಮತ್ತು ನಾಗಾಲ್ಯಾಂಡ್‌ನಲ್ಲಿ ಫೆ. 27 ರಂದು ಮತದಾನ ನಡೆಯಲಿದೆ. ಎಲ್ಲಾ ಮೂರು ರಾಜ್ಯಗಳ ಮತಗಳ ಎಣಿಕೆ ಮಾರ್ಚ್ 2 ರಂದು ಏಕಕಾಲದಲ್ಲಿ ನಡೆಯಲಿದೆ.