ಪ್ರಾಣ ಪಣಕ್ಕಿಟ್ಟು 15 ಜನರ ಜೀವ ಉಳಿಸಿದ ಸಾರಿಗೆ ಬಸ್ ಚಾಲಕ, ನಿರ್ವಾಹಕನಿಗೆ ಸನ್ಮಾನ

ಕಲಬುರಗಿ : ಶಿವಸ್ವಾಮಿಗಳನ್ನು ಸಾಗಿಸುತ್ತಿದ್ದ ಖಾಸಗಿ ವಾಹನವೊಂದು ಗ್ಯಾಸ್ ಸಿಲಿಂಡರದಿಂದ ಬೆಂಕಿ ಹತ್ತಿ ಅಗ್ನಿಅವಘಡ ಸಂಭವಿಸಿದಾಗ ಸಮಯಪ್ರಜ್ಞೆಯಿಂದ ನಿಗಮದ ವಾಹನ ಚಾಲಕ ಹಾಗೂ ನಿರ್ವಾಹಕರು ಬಸ್ಸಿನಲ್ಲಿ ಲಭ್ಯವಿದ್ದ ಅಗ್ನಿನಂದಕಗಳಿಂದ ಬೆಂಕಿ ನಂದಿಸಿ, 15ಕ್ಕೂ ಹೆಚ್ಚು ಶಿವಸ್ವಾಮಿಗಳ ಪ್ರಾಣವನ್ನು ರಕ್ಷಿಸಿದ್ದಾರೆ.
ಇವರಿಬ್ಬರ ಕಾರ್ಯವನ್ನು ಮೆಚ್ಚಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಎಮ್. ರಾಚಪ್ಪ ಅವರು ಚಾಲಕ ಹಾಗೂ ನಿರ್ವಾಹಕರಿಗೆ 2,000 ರೂ. ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಿದರು.
ಕಲಬುರಗಿ-ಶ್ರೀಶೈಲಂ ಮಾರ್ಗದಲ್ಲಿ ಫೆಬ್ರವರಿ 13 ರಂದು ಬಸ್ ಕಾರ್ಯಾಚರಣೆ ಮಾಡುವ ಸಂದರ್ಭದಲ್ಲಿ ವಬವರ್ಪಲ್ಲಿ ಹೊಂಬಾಲಪೇಟ ಮಧ್ಯದ ಅರಣ್ಯದ ಹತ್ತಿರದಲ್ಲಿ ಸುಮಾರು 15ಕ್ಕೂ ಹೆಚ್ಚು ಶಿವಸ್ವಾಮಿಗಳನ್ನು ಸಾಗಿಸುತ್ತಿದ್ದ ಖಾಸಗಿ ವಾಹನವೊಂದು ಗ್ಯಾಸ್ ಸಿಲಿಂಡರದಿಂದ ಬೆಂಕಿ ಹತ್ತಿ ಅಗ್ನಿಅವಘಡ ಸಂಭವಿಸಿದಾಗ ಇದೇ ಸಮಯದಲ್ಲಿ ಇದರ ಹಿಂದೆ ಬರುತ್ತಿದ್ದ ನಿಗಮದ ಬಸ್ ಚಾಲಕರಾದ ಸಂತೋಷ ಬಿಲ್ಲೆ ಹಾಗೂ ನಿರ್ವಾಹಕರಾದ ಚನ್ನನಬಸವಾರ್ಯ ಇವರ ಸಮಯಪ್ರಜ್ಞೆಯಿಂದ ಬಸ್ಸಿನಲ್ಲಿ ಲಭ್ಯವಿದ್ದ ಅಗ್ನಿನಂದಕಗಳಿಂದ ಬೆಂಕಿ ನಂದಿಸಿ, 15ಕ್ಕೂ ಹೆಚ್ಚು ಶಿವಸ್ವಾಮಿಗಳ ಪ್ರಾಣವನ್ನು ರಕ್ಷಿಸಿರುತ್ತಾರೆ.ಕಾರ್ಯಕ್ರಮದಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧಿಕಾರಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.