ಪ್ರಧಾನಿಗೆ ನಿದ್ರಾ ಹೀನತೆ ರೋಗ: ಕೇಜ್ರಿವಾಲ್ ಆರೋಪ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ನಿದ್ರಾ ಹೀನತೆ ರೋಗದಿಂದ ಬಳಲುತ್ತಿದ್ದಾರೆ ಎಂದು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಆರೋಪಿಸಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿದ ಅವರು, ಬಿಜೆಪಿಯ ಕಾರ್ಯಕರ್ತರೊಬ್ಬರನ್ನು ಮಾತನಾಡಿಸಿದ ವೇಳೆ, ಪ್ರಧಾನಿ ಮೋದಿ 18 ಗಂಟೆ ಕೆಲಸ ಮಾಡಿ, ಕೇವಲ ಮೂರು ಗಂಟೆ ಮಾತ್ರ ನಿದ್ರೆ ಮಾಡುತ್ತಿದ್ದಾರೆ.
ಆಗ ತಾವು ಅದೊಂದು ರೋಗದ ಲಕ್ಷಣವೇ ಹೊರತು. ದೈವಿಕ ಶಕ್ತಿಯಲ್ಲ ಎಂದು ಹೇಳಿದ್ದೆ ಎಂದರು. ಪ್ರಧಾನಿಯವರು ದಿನವಿಡೀ ಕೋಪದಲ್ಲಿಯೇ ಇರುತ್ತಾರೆ ಎಂದು ಲೇವಡಿ ಮಾಡಿದ್ದಾರೆ. ಕರ್ನಾಟಕ ಸರ್ಕಾರದ ಬಗ್ಗೆ ಟೀಕೆ ಮಾಡಿದ ಅವರು, ರಾಜ್ಯದಲ್ಲಿ ಶೇ.40 ಪರ್ಸೆಂಟ್ ಸರ್ಕಾರ ಇದೆ ಎಂದರು.