ನಿಮ್ಮಪ್ಪನಿಂದಲೂ ಬಾಬರ್ ಮಸೀದಿ ಕಟ್ಟಲು ಸಾಧ್ಯವಿಲ್ಲ: ರಶೀದ್‌ಗೆ ಎಚ್ಚರಿಕೆ ಕೊಟ್ಟ ಮುತಾಲಿಕ್

ಧಾರವಾಡ, ಡಿಸೆಂಬರ್ 31: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರವನ್ನು ಕೆಡವಿ ಮುಂದೊಂದು ದಿನ ಮತ್ತೆ ಬಾಬರ್ ಮಸೀದಿ ಕಟ್ಟುತ್ತೇವೆ ಎಂದು ಹೇಳಿಕೆ ಕೊಟ್ಟಿರುವ ಇಮಾಮ್ ಅಸೋಸಿಯೇಶನ್ ಅಧ್ಯಕ್ಷ ಮೌಲಾನಾ ಸಾಜಿದ್ ರಶೀದ್ ವಿರುದ್ಧ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಗುಡುಗಿದ್ದಾರೆ.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನು 50-100 ವರ್ಷ ಆದ ಮೇಲೆ ನಮ್ಮ ದೊರೆ ಬರುತ್ತಾನೆ. ಆಗ ರಾಮ ಮಂದಿರ ಕೆಡವಿ ಮತ್ತೆ ಬಾಬರ್ ಮಸೀದಿ ಕಟ್ಟುತ್ತೇವೆ ಎಂದು ರಶೀದ್ ಹೇಳಿಕೆ ನೀಡಿದ್ದಾನೆ. ಇನ್ನು 100 ವರ್ಷ, ಸಾವಿರ ವರ್ಷವಾದರೂ ರಾಮ ಮಂದಿರ ಕೆಡವಿ ಬಾಬರ್ ಮಸೀದಿ ಕಟ್ಟಲು ನಿಮ್ಮಪ್ಪನಿಂದಲೂ ಸಾಧ್ಯವಿಲ್ಲ ಎಂದು ಪ್ರಮೋದ್ ಮುತಾಲಿಕ್ ಗುಡುಗಿದ್ದಾರೆ.
ಸೊಕ್ಕಿನ ಮಾತನ್ನು ರಶೀದ್ ಹೇಳಿದ್ದಾನೆ. ಇಂತವರು ಈ ದೇಶದ ಅನ್ನ ತಿಂದವರು. ಈ ದೇಶದ ಮುಸ್ಲಿಂರಿಗೆ ಬಾಬರ್ ಯಾವುದೇ ಸಂಬಂಧ ಇಲ್ಲದಿದ್ದರೂ ಇಸ್ಲಾಂ ಪ್ರತಿಷ್ಠಾಪನೆಯ ಮೂಲ ಉದ್ದೇಶ ಹೊಂದಿದ್ದಾರೆ. ಇದು ಮೌಲಾನಾ ರಶೀದ್ ಬಾಯಿಂದ ಹೊರ ಬಂದಿದೆ ಎಂದಿದ್ದಾರೆ.
ಮಾತು ಮುಂದುವರಿಸಿದ ಪ್ರಮೋದ್ ಮುತಾಲಿಕ್, ಈ ದೇಶದ ಹಿಂದೂಗಳು ಜಾಗೃತಗೊಂಡಿದ್ದಾರೆ. ರಶೀದ್‌ನಂತಹ ಮಾನಸಿಕತೆ ಇರುವ ಮುಸ್ಲಿಂರಿಗೆ ಎಚ್ಚರಿಕೆ ಕೊಡುವ ಉದ್ದೇಶದಿಂದಲೇ ನೂರು ವರ್ಷಗಳಿಂದ ಆರ್‌ಎಸ್‌ಎಸ್ ಕೆಲಸ ಮಾಡುತ್ತಿದೆ. ಬಜರಂಗದಳ, ವಿಶ್ವ ಹಿಂದೂ ಪರಿಷತ್, ಹಿಂದೂ ಜಾಗರಣ ವೇದಿಕೆ, ಶ್ರೀರಾಮ ಸೇನೆ ಕೆಲಸ ಮಾಡುತ್ತಿವೆ. ನಿಮ್ಮ ಸೊಕ್ಕು ಅಡಗಿಸಲು ನಾವು ಸಿದ್ಧರಿದ್ದೇವೆ. ಅಯೋಧ್ಯೆಯಲ್ಲಿ ರಾಮನ ಮೂರ್ತಿಯೇ ಇರುತ್ತದೆ ಹೊರತು, ಬಾಬರ್, ಔರಂಗಜೇಬನ ಮೂರ್ತಿಯಲ್ಲಿ. ಅಲ್ಲಿ ಯಾವುದೇ ಇಸ್ಲಾಂ ಧರ್ಮ ಗುರು ಇರಲು ಬಿಡುವುದಿಲ್ಲ ಎಂದಿದ್ದಾರೆ.