'ನಮ್ಮ ಮೆಟ್ರೋ' ಪಿಲ್ಲರ್ ಗೆ ಬಲಿಯಾದ ತಾಯಿ-ಮಗುವಿನ ಅಂತ್ಯಕ್ರಿಯೆ : ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

'ನಮ್ಮ ಮೆಟ್ರೋ' ಪಿಲ್ಲರ್ ಗೆ ಬಲಿಯಾದ ತಾಯಿ-ಮಗುವಿನ ಅಂತ್ಯಕ್ರಿಯೆ : ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

ದಾವಣಗೆರೆ: ಬೆಂಗಳೂರಿನಲ್ಲಿ 'ನಮ್ಮ ಮೆಟ್ರೋ' ಪಿಲ್ಲರ್ ರಾಡ್ ಬಿದ್ದು ತಾಯಿ, ಮಗ ಸಾವನ್ನಪ್ಪಿದ್ದು, ಕುಟುಂಬಸ್ಥರಿಗೆ ಬರಸಿಡಿಲೇ ಬಡಿದಂತಾಗಿದೆ.

ಸೊಸೆ ಹಾಗೂ ಮುದ್ದಾಗ ಮಗಳನ್ನು ಕಳೆದುಕೊಂಡ ಮನೆಯವರು ತಾಯಿ ಮಗುವಿನ ಅಂತ್ಯ ಸಂಸ್ಕಾರವನ್ನು ಇಂದು ನೆರವೇರಿಸಿದ್ದಾರೆ.

ದಾವಣಗೆರೆ ನಗರದ ಕುಂದವಾಡ ರಸ್ತೆಯ ಬಸವೇಶ್ವರ ನಗರದಲ್ಲಿರುವ ನಿವಾಸದಲ್ಲಿ ಭಾವಸಾರ ಕ್ಷತ್ರೀಯ ಸಮಾಜದ ನಿಯಮದಂತೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ಮೊದಲು ಗ್ಲಾಸ್ ಹೌಸ್ ಬಳಿಯ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಿದ್ದು, ಬಳಿಕ ಪಿಬಿ ರಸ್ತೆಯಲ್ಲಿರುವ ವೈಕುಂಠ ದಾಮದಲ್ಲಿ ತಾಯಿ ತೇಜಸ್ವಿನಿ ಮೃತದೇಹ ದಹನ ಮಾಡಲಾಯಿತು. ಈ ಸಂದರ್ಭದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಪತ್ನಿ, ಮಗನ ಸಾವಿಗೆ ಕಾರಣರಾದವರ ವಿರುದ್ಧ ಕ್ರಮಕ್ಕೆ ಪತಿ ಲೋಹಿತ್ ದೂರು ನೀಡಿದ್ದಾರೆ. ಕಿಲ್ಲರ್ ಪಿಲ್ಲರ್ ಮಹಾದುರಂತದ ಬಗ್ಗೆ ವಿವರಣಾತ್ಮಕ ದೂರು ನೀಡಿದ್ದು, ಗೋವಿಂದಪುರ ಠಾಣೆಯ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.