ನನ್ನ ವಿರುದ್ಧ ಡಿ.ಕೆ ಶಿವಕುಮಾರ್‌, ಡಿ.ಕೆ ಸುರೇಶ್‌ ಇಬ್ಬರೂ ಸ್ಪರ್ಧೆ ಮಾಡಲಿ: ಮುನಿರತ್ನ ಸವಾಲು

ನನ್ನ ವಿರುದ್ಧ ಡಿ.ಕೆ ಶಿವಕುಮಾರ್‌, ಡಿ.ಕೆ ಸುರೇಶ್‌ ಇಬ್ಬರೂ ಸ್ಪರ್ಧೆ ಮಾಡಲಿ: ಮುನಿರತ್ನ ಸವಾಲು

ಬೆಂಗಳೂರು: ನನ್ನ ವಿರುದ್ಧ ಡಿ.ಕೆ ಶಿವಕುಮಾರ್‌ ಮತ್ತು ಡಿ.ಕೆ ಸುರೇಶ್‌ ಇಬ್ಬರೂ ಸ್ಪರ್ಧೆ ಮಾಡಲಿ ಎಂದು ತೋಟಗಾರಿಕೆ ಸಚಿವ ಮುನಿರತ್ನ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಆರ್‌ ಆರ್‌ ನಗರದಲ್ಲಿ ಕುಸುಮಾರನ್ನು ಗೆಲ್ಲಿಸೋದು ಯಾಕೆ?

ಬೇಕಿದ್ರೆನನ್ನ ವಿರುದ್ಧ ಒಬ್ಬರು ಯಾಕೆ, ಇಬ್ಬರೂ ಬಂದು ಸ್ಪರ್ಧೇ ಮಾಡಲಿ. ಈ ಹಿಂದೆ ಎಷ್ಟು ಅಂತರದಲ್ಲಿ ಸೋತಿದ್ದಾರೆಂಬುದು ಗೊತ್ತಿದೆಯಲ್ಲ. ಚುನಾವಣೆ ವೇಳೆ ಏನೇನೂ ಕದ್ದ ಅಂತಾ ಆರೋಪ ಮಾಡುತ್ತಾನೆ. ಬೇಕಿದ್ದರೆ ಮೆಟ್ರೋ ಕದ್ದ ಅಂತಲೂ ಹೇಳುತ್ತಾರೆ. ಮುಂದೆ ಇನ್ನೂ ಜಾಸ್ತಿ ಆರೋಪ ಮಾಡುತ್ತಾರೆ. ಇದಕ್ಕೆಲ್ಲಾ ಯಾರು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಕಿಡಿಕಾರಿದ್ದಾರೆ.

ಕೋಲಾರದಲ್ಲಿ ಮುನಿರತ್ನ ಸ್ಪರ್ಧೆ ಮಾಡ್ತಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ವರಿಷ್ಠರು ಹೇಳಿದರೆ ಕೋಲಾರದಲ್ಲಿ ಸ್ಪರ್ಧೆಗೆ ಸಿದ್ಧನಿದ್ದೇನೆ. ನನ್ನ ಪಕ್ಷ ಎಲ್ಲಿ ಹೋಗು ಎನ್ನುತ್ತಾರೋ ಅಲ್ಲೇ ಹೋಗಿ ಸ್ಪರ್ಧೆ ಮಾಡ್ತೇನೆ. ಪಕ್ಷ ದೊಡ್ಡದು. ಹೀಗಾಗಿ ಪಕ್ಷದ ಸೂಚನೆ ಪಾಲಿಸುತ್ತೇನೆ. ಕೋಲಾರಕ್ಕೆ ಹೋಗು ಅಂದ್ರೆ ಹೋಗುತ್ತೇನೆ. ಬೇರೆ ಕ್ಷೇತ್ರಕ್ಕೆ ಹೋಗು ಅಂದ್ರೂ ಹೋಗುತ್ತೇನೆ ಎಂದು ಸ್ಪಷ್ಟಪಡಿಸಿದರು.

ಇನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರಿಗೆ ಹೆಚ್ಚು ಗಮನ ಕೊಡುತ್ತಿದ್ದಾರೆ. 265 ಕಡೆ ಜನೌಷಧ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಡಬಲ್ ಇಂಜಿನ್ ಸರ್ಕಾರದ ಮೂಲಕ ಸಾರ್ವಜನಿಕರಿಗೆ ಸೌಲಭ್ಯ ತಲುಪಿಸುವ ಕೆಲಸ ಆಗಲಿದೆ ಎಂದರು.