ಡಿಜೆ ನಿಲ್ಲಿಸಿʼ ಎಂದಿದ್ಕೆ ಪಶ್ಚಿಮ ಬಂಗಾಳದ ಟಿಎಂಸಿ ನಾಯಕನ ಕೊಲೆ, 14 ಮಂದಿ ಅರೆಸ್ಟ್

ಪಶ್ಚಿಮ ಬಂಗಾಳ: ಪಶ್ಚಿಮ ಬಂಗಾಳದ ಮಾಲ್ಡಾದ ತೃಣಮೂಲ ಉಪ ಮುಖ್ಯಸ್ಥ ಅಫ್ಜಲ್ ಮೊಮಿನ್ ಅವರನ್ನು ಬರ್ಬರವಾಗಿ ಹೊಡೆದು ಕೊಲ್ಲಲಾಗಿದೆ. ಡಿಜೆ ಆಡುವುದನ್ನು ನಿಲ್ಲಿಸಿದ್ದೇ ಈ ಕೊಲೆಗೆ ಕಾರಣ ಎನ್ನಲಾಗಿದೆ.
ಮೋಥಾ ಬಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಪೊಲೀಸ್ ಮೂಲಗಳ ಪ್ರಕಾರ, ಅಫ್ಜಲ್ ಕೈಲಾಶ್‌ಜಿ ಬ್ಲಾಕ್‌ನ ರಥ ಬರಿ ಗ್ರಾಮ ಪಂಚಾಯತ್‌ನ ಉಪ ಮುಖ್ಯಸ್ಥರಾಗಿದ್ದರು. ಕೆಲ ಯುವಕರು ಗ್ರಾಮದಲ್ಲಿ ಡಿಜೆ ಹಾಕಿಕೊಂಡು ಡ್ಯಾನ್ಸ್ ಮಾಡುತ್ತಾ ಗಲಾಟೆ ಮಾಡುತ್ತಿದ್ದರು. ಮಂಗಳವಾರ ಬೆಳಗ್ಗೆಯೂ ಯುವಕರು ಡಿಜೆ ಬಾರಿಸುತ್ತಾ ಗ್ರಾಮಕ್ಕೆ ಭೇಟಿ ನೀಡಿದ್ದರು. ಇದನ್ನು ನಿಲ್ಲಿಸುವಂತೆ ಗ್ರಾಮಸ್ಥರು ಯುವಕರು ಸುಮ್ಮನಾದರು.
ಆದರೆ, ಯುವಕರು ಮತ್ತೆ ರಾತ್ರಿ ವೇಳೆ ಡಿಜೆಯನ್ನು ಪ್ಲೇ ಮಾಡಿದ್ದಾರೆ. ಈ ವೇಳೆ ಡಿಜೆ ಆಡುವುದನ್ನು ನಿಲ್ಲಿಸಿ ಎಂದು ಗ್ರಾಮಸ್ಥರು ಮತ್ತು ಯುವಕರ ನಡುವೆ ಘರ್ಷಣೆ ನಡೆಯಿತು. ಈ ವೇಳೆ ಯುವಕರು ಅಫ್ಜಲ್ ಮೋಮಿನ್ ಅವರನ್ನು ತೀವ್ರವಾಗಿ ಥಳಿಸಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾದರೂ, ಅಲ್ಲಿ ವೈದ್ಯರು ಅಫ್ಜಲ್ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 14 ಮಂದಿಯನ್ನು ಬಂಧಿಸಿದ್ದಾರೆ.