ಬೆಂಗಳೂರಿನಲ್ಲಿ ತಂದೆಯನ್ನೇ ಸುಪಾರಿ ಕೊಟ್ಟು ಕೊಲೆ ಮಾಡಿದ ಪ್ರಕರಣ; ಮಗ ಸೇರಿದಂತೆ ಇಬ್ಬರು ಅರೆಸ್ಟ್
ಬೆಂಗಳೂರು: ಬೆಂಗಳೂರಿನಲ್ಲಿ ತಂದೆಯನ್ನೇ ಸುಪಾರಿ ಕೊಟ್ಟು ಕೊಲೆ ಮಾಡಿಸಿದ ಮಗ ಸೇರಿದಂತೆ ಆತನ ಸಹಚರರನ್ನು ಮಾರತ್ಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಪುತ್ರ ಮಣಿಕಂಠ, ಶಿವಕುಮಾರ್, ನವೀನ್ ಕುಮಾರ್ ಬಂಧಿತರು.ಫೆ.13ರಂದು ಅಪಾರ್ಟ್ಮೆಂಟ್ನ ಪಾರ್ಕಿಂಗ್ ಲಾಟ್ನಲ್ಲಿ ನಾರಾಯಣಸ್ವಾಮಿ ಎಂಬುವರನ್ನು ಮಗ ಸುಪಾರಿ ಕೊಟ್ಟು ಕೊಲ್ಲಿಸಿದ್ದರು.ಪುತ್ರ ಮಣಿಕಂಠ ಶಿವಕುಮಾರ್, ನವೀನ್ ಕುಮಾರ್ಗೆ ಮುಂಗಡವಾಗಿ 1 ಲಕ್ಷ ರೂಪಾಯಿ ನೀಡಿ ತನ್ನ ತಂದೆಯ ಕೊಲೆ ಮಾಡಲು 1 ಕೋಟಿ ರೂ.
ಘಟನೆ ಹಿನ್ನೆಲೆ
ಈ ಹಿಂದೆ ಮಣಿಕಂಠ ತನ್ನ ಮೊದಲ ಪತ್ನಿಯನ್ನು ಕೊಲೆ ಮಾಡಿ ಜೈಲು ಸೇರಿದ್ದ. ಜೈಲಿನಿಂದ ಹೊರಬಂದು ಎರಡನೇ ವಿವಾಹವಾಗಿದ್ದ, ಒಂದು ಹೆಣ್ಣು ಮಗಳಿದ್ದಳು. ಎರಡನೇ ಮದುವೆ ಬಳಿಕವೂ ಬೇರೊಬ್ಬ ಮಹಿಳೆ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದನು. ಈ ವಿಚಾರ ಗೊತ್ತಾಗಿ ಎರಡನೇ ಪತ್ನಿ ಪತಿಯಿಂದ ದೂರವಿದ್ದಳು.