ಡಬಲ್​​ ಸೆಂಚುರಿ ಸ್ಟಾರ್​​​ ಶುಭ್ಮನ್​​ ಗಿಲ್​​ಗೆ​​​ ಹೊಸ ಹೆಸರಿಟ್ಟ ಸುನೀಲ್​ ಗವಾಸ್ಕರ್

ಡಬಲ್​​ ಸೆಂಚುರಿ ಸ್ಟಾರ್​​​ ಶುಭ್ಮನ್​​ ಗಿಲ್​​ಗೆ​​​ ಹೊಸ ಹೆಸರಿಟ್ಟ ಸುನೀಲ್​ ಗವಾಸ್ಕರ್

ಟೀಮ್​ ಇಂಡಿಯಾದ ಯಂಗ್​ ಓಪನರ್​ ಶುಭ್​ಮನ್​ ಗಿಲ್ ಶ್ರೀಲಂಕಾ ಹಾಗೂ ನ್ಯೂಜಿಲೆಂಡ್ ವಿರುದ್ಧ ಅಬ್ಬರಿಸಿದ್ರು. ಕಿವೀಸ್​ ವಿರುದ್ಧ ದ್ವಿಶತಕ ಸಿಡಿಸಿದ್ದಲ್ಲದೇ 2ನೇ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿ ತಂಡ ಗೆಲ್ಲುವವರೆಗೆ ಕ್ರೀಸ್​ನಲ್ಲಿದ್ರು. ಸದ್ಯ ಗಿಲ್​ಗೆ ಕ್ರಿಕೆಟ್ ದಿಗ್ಗಜ ಸುನಿಲ್​ ಗವಾಸ್ಕರ್ ಚಂದದೊಂದು ಹೆಸರಿಟ್ಟಿದ್ದಾರೆ.

ಓಪನರ್​​​​​​​ ಶುಭ್​​ಮನ್​ ಗಿಲ್​ರ ಬ್ಯಾಟಿಂಗ್​ಗೆ ಫಿದಾ ಆಗಿರುವ ಭಾರತ ತಂಡದ ಮಾಜಿ ಆಟಗಾರ ಸುನಿಲ್​ ಗವಾಸ್ಕರ್ ಅಡ್ಡ ಹೆಸರೊಂದನ್ನ ಇಟ್ಟಿದ್ದಾರೆ. ಶ್ರೀಲಂಕಾ ಸರಣಿಯ ಬಳಿಕ ಇದೀಗ ನ್ಯೂಜಿಲೆಂಡ್​ ವಿರುದ್ಧವೂ ಕೂಡ ಅಬ್ಬರಿಸ್ತಿರುವ ಗಿಲ್​​​​​​, ಮ್ಯಾಚ್ ​ವಿನ್ನಿಂಗ್​ ಪರ್ಫಾಮೆನ್ಸ್​ ನೀಡ್ತಿದ್ದಾರೆ. ಕಿವೀಸ್ ವಿರುದ್ಧದ 2ನೇ ಏಕದಿನ ಬಳಿಕ ಗಿಲ್ ಜೊತೆ ಸಂಭಾಷಣೆ ನಡೆಸಿದ ಗವಾಸ್ಕರ್, ನಾನು ನಿಮಗೆ ಸ್ಮೂತ್‌ಮ್ಯಾನ್ ಗಿಲ್ ಎಂಬ ಹೊಸ ಅಡ್ಡಹೆಸರನ್ನು ಇಟ್ಟಿದ್ದೇನೆ. ನೀವು ಅನ್ಯತ ಭಾವಿಸುವುದಿಲ್ಲವೇ ಎಂದು ಗಿಲ್​ಗೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಗಿಲ್​, ನನಗೇನು ಅಭ್ಯಂತರ ಇಲ್ಲ ಸರ್​ ಎಂದಿದ್ದಾರೆ.

ನ್ಯೂಜಿಲೆಂಡ್​ ವಿರುದ್ಧದ 3 ಮ್ಯಾಚ್​ಗಳ ಸರಣಿಯಲ್ಲಿ ಭಾರತ ತಂಡ ಈಗಾಗಲೇ 2-0 ದಿಂದ ಮುನ್ನಡೆ ಸಾಧಿಸಿ ಸರಣಿ ತನ್ನದಾಗಿಸಿ ಕೊಂಡಿದೆ. ನಾಳೆ 3ನೇ ಪಂದ್ಯ ಇಂದೋರ್​ನ ಹೋಲ್ಕರ್​ ಕ್ರೀಡಾಂಗಣದಲ್ಲಿ ನಡೆಯಲಿದ್ದು ಈ ಪಂದ್ಯವನ್ನು ಕೂಡ ಭಾರತ ಗೆದ್ದು ಕ್ಲೀನ್​ ಸ್ವೀಪ್​ ಮಾಡುವ ನಿರೀಕ್ಷೆಯಲ್ಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ