ಟೆಸ್ಟ ಡ್ರೈವ್‌ಗೆಂದು ಹೊಸ ಕಾರು ಕೊಂಡೊಯ್ದು ಲಾರಿಗೆ ಡಿಕ್ಕಿ... ಕಂಪನಿ ವಿಧಿಸಿದ ದಂಡಕ್ಕೆ ಸುಸ್ತು

ಟೆಸ್ಟ ಡ್ರೈವ್‌ಗೆಂದು ಹೊಸ ಕಾರು ಕೊಂಡೊಯ್ದು ಲಾರಿಗೆ ಡಿಕ್ಕಿ... ಕಂಪನಿ ವಿಧಿಸಿದ ದಂಡಕ್ಕೆ ಸುಸ್ತು

ಸಾಮಾನ್ಯವಾಗಿ ಮಾರುಕಟ್ಟೆಗೆ ಹೊಸ ವಾಹನಗಳ ಆಗಮನವಾದರೆ ಆಟೋ ಉತ್ಸಹಿಗಳಲ್ಲಿ ಕ್ರೇಜ್ ಹೆಚ್ಚಾಗುತ್ತದೆ. ಒಮ್ಮೆ ಅದನ್ನು ಓಡಿಸಿ ಅದರ ಅನುಭವ ಪಡೆಯುವ ಉತ್ಸುಕತೆ ಹೆಚ್ಚಾಗಿರುತ್ತದೆ. ಆದರೆ ಹೊಸ ವಾಹನವನ್ನು ಓಡಿಸಲು ಶೋರೂಂ ಭೇಟಿ ನೀಡಿ ಟೆಸ್ಟ್‌ಡ್ರೈವ್ ಮಾಡಬೇಕಾಗುತ್ತದೆ.

ಹೀಗೆಯೇ ಟೆಸ್ಟ್‌ಡ್ರೈವ್ ಮಾಡಲೆಂದು ವಾಹನ ಕೊಂಡೊಯ್ದು ವ್ಯಕ್ತಿಯೊಬ್ಬ ಹೊಸ ಕಾರನ್ನು ಹಾನಿಗೊಳಿಸಿದ್ದಾನೆ.

ತಮ್ಮ ಹೊಸ ಕಾರುಗಳ ಮಾರಾಟ ಹೆಚ್ಚಿಸಲು ಸದಾ ಗ್ರಾಹಕರನ್ನು ಸೆಳೆಯುವ ಕಂಪನಿಗಳು ಹಾಗೂ ಶೋರೂಂಗಳು ಗ್ರಾಹಕರ ಆಸಕ್ತಿ ಮೇರೆಗೆ ವಾಹನಗಳನ್ನು ಟೆಸ್ಟ್‌ಡ್ರೈವ್‌ಗೆಂದು ನೀಡುತ್ತಾರೆ. ಈ ವೇಳೆ ಕೆಲವರು ತುಂಬಾ ಉತ್ಸುಕರಾಗಿ ರಸ್ತೆಯಲ್ಲಿ ತಮ್ಮ ಚಾಲನಾ ಕೌಶಲ್ಯವನ್ನು ಸಾಬೀತುಪಡಿಸಲು ಪ್ರಯತ್ನಿಸುತ್ತಾರೆ. ಆದರೆ ಇದು ಅಪಘಾತಗಳಿಗೆ ಕಾರಣವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ, ಏಕೆಂದರೆ ಓಡಿಸುವವರಿಗೆ ಎಷ್ಟೇ ಅನುಭವ ಇದ್ದರೂ ಮಾರುಕಟ್ಟೆಗೆ ಹೊಸದಾಗಿ ಲಗ್ಗೆಯಿಡುವ ವಾಹನಗಳಲ್ಲಿನ ವೈಶೀಷ್ಟ್ಯಗಳ ಬಗ್ಗೆ ಹೆಚ್ಚಾಗಿ ತಿಳಿದಿರುವುದಿಲ್ಲ.

ಇಲ್ಲಿ ಕೂಡ ಅಂತಹದೇ ಘಟನೆ ವರದಿಯಾಗಿದೆ, ಉತ್ತರ ಪ್ರದೇಶದ ವ್ಯಕ್ತಿಯೊಬ್ಬ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾವನ್ನು ಟೆಸ್ಟ್ ಡ್ರೈವ್‌ಗಾಗಿ ಪಡೆದು ಅಪಘಾತಕ್ಕೆ ಸಿಲುಕಿಸಿದ್ದಾನೆ. ಹೆಚ್ಚಿನ ವೇಗದಲ್ಲಿ ಟೆಸ್ಟ್ ಡ್ರೈವ್ ವಾಹನವನ್ನು ಡಿಕ್ಕಿ ಹೊಡೆದಿದ್ದಾನೆ ಎಂದು ತಿಳಿದುಬಂದಿದೆ. ಅದೃಷ್ಟವಶಾತ್ ಮಾರುತಿ ಸುಜುಕಿ ನೆಕ್ಸಾ ಡೀಲರ್‌ಶಿಪ್‌ ಸಿಬ್ಬಂದಿಗೆ ಹಾಗೂ ರಸ್ತೆಯಲ್ಲಿನ ಸಾರ್ವಜನಿಕರಿಗೆ ಯಾವುದೇ ಗಾಯಗಳಾಗಿಲ್ಲ. ಆದರೆ ಹೊಸ SUV ಮುಂಭಾಗದ ತುದಿಯು ಅಕ್ಷರಶಃ ನೀವು ಚಿತ್ರದಲ್ಲಿ ನೋಡುವಂತೆ ಹೆಚ್ಚು ಹಾನಿಗೊಳಗಾಗಿತ್ತು.

ಹೊಸ ಕಾರಿನ ರಿಪೇರಿಗಾಗಿ ಟೆಸ್ಟ್‌ಡ್ರೈವ್ ಮಾಡಿ ಅಪಘಾತಕ್ಕೆ ಸಿಲಿಕಿದ ವ್ಯಕ್ತಿಗೆ ಭಾರಿ ಮೊತ್ತವನ್ನು ವಿಧಿಸಲಾಗಿದೆ. ಸುರಕ್ಷತಾ ವೈಶಿಷ್ಟ್ಯಗಳನ್ನು ಪರೀಕ್ಷಿಸುವಾಗ ಅಜಾಗರೂಕತೆಯಿಂದ ವಾಹನ ಚಲಾಯಿಸಲಾಗಿದೆ ಎಂದು ಹೇಳಲಾಗಿದ್ದು, ಘಟನೆಯಿಂದ ಉಂಟಾದ ಹಾನಿಗೆ ಸುಮಾರು ರೂ. 1.40 ಲಕ್ಷವನ್ನು ಪಾವತಿಸಲು ಆತನಿಗೆ ಸೂಚಿಸಲಾಗಿದೆ. ಮಿನಿ ಲಾರಿಗೆ ಮುಖಾಮುಖಿ ಡಿಕ್ಕಿ ಹೊಡೆದಿದ್ದಾರೆ ಎಂದು ಹೇಳಲಾಗಿದೆ. ಚಾಲಕ ಮಾಡಿದ ತನ್ನ ಅಜಾಗರೂಕ ವರ್ತನೆಯಿಂದ ಪೂರ್ಣ ಮೊತ್ತವನ್ನು ದಂಡಿವಾಗಿ ಪಾವತಿಸುವುದು ಸರಿಯೇ?

ಮಾರುತಿ ಸುಜುಕಿ ಗ್ರಾಂಡ್ ವಿಟಾರಾ:

ಮಾರುತಿ ಸುಜುಕಿ ಗ್ರಾಂಡ್ ವಿಟಾರಾ ಬಿಡುಗಡೆಯಾದ ಕೆಲವೇ ತಿಂಗಳಲ್ಲಿ ದೇಶದಲ್ಲಿ ಅತಿ ಹೆಚ್ಚು ಮಾರಾಟವಾಗುವ ಮಧ್ಯಮ ಗಾತ್ರದ SUV ಗಳಲ್ಲಿ ಒಂದಾಗಿದೆ. ಇದರ ಬೆಲೆ ರೂ. 10.45 ಲಕ್ಷದಿಂದ ಆರಂಭವಾಗಿ ರೂ. 19.65 ಲಕ್ಷ (ಎಕ್ಸ್ ಶೋ ರೂಂ)ವರೆಗೆ ಹೋಗುತ್ತದೆ. ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಬುಕಿಂಗ್ ಅಧಿಕೃತವಾಗಿ 2022 ಜುಲೈ 16 ರಂದು ಪ್ರಾರಂಭವಾಯಿತು, ಕೆಲವು ನೆಕ್ಸಾ ಡೀಲರ್‌ಶಿಪ್‌ಗಳು ಅದಕ್ಕಿಂತ ಮುಂಚಿತವಾಗಿ ಬುಕಿಂಗ್ ಅನ್ನು ಪ್ರಾರಂಭಿಸಿದ್ದವು.

2022 ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಮಧ್ಯಮ ಗಾತ್ರದ SUV ವಿಭಾಗದಲ್ಲಿ ಕಂಪನಿಯ ಮೊದಲ ಉತ್ಪನ್ನವಾಗಿದ್ದು, ಇದನ್ನು ಮಾರುತಿ ಸುಜುಕಿ ಮತ್ತು ಟೊಯೋಟಾ ಪಾಲುದಾರಿಕೆಯಲ್ಲಿ ನಿರ್ಮಿಸಲಾಗಿದೆ. ಜಾಗತಿಕ C ಪ್ಲಾಟ್‌ಫಾರ್ಮ್ ಅನ್ನು ಆಧರಿಸಿ, ಗ್ರ್ಯಾಂಡ್ ವಿಟಾರಾವು 1.5-ಲೀಟರ್ K-ಸರಣಿಯ ಮೈಲ್ಡ್ ಹೈಬ್ರಿಡ್ ಎಂಜಿನ್ ಮತ್ತು ಟೊಯೋಟಾ-ಮೂಲದ 1.5-ಲೀಟರ್ ಬಲವಾದ ಹೈಬ್ರಿಡ್ ಎಂಜಿನ್‌ನಿಂದ ಚಾಲಿತವಾಗಿದೆ. ಹಾಗೆಯೇ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾವನ್ನು ಹಲವಾರು ವೈಶಿಷ್ಟ್ಯಗಳೊಂದಿಗೆ ಸಜ್ಜುಗೊಳಿಸಲಾಗಿದೆ.

ಇದರಲ್ಲಿ ಎರಡು ಪ್ರಮುಖವಾದ ವಿಷಯಗಳೆಂದರೆ ಅದರ ಇಂಧನ ದಕ್ಷತೆ - 27.9 kmpl - ಮತ್ತು ಅದರ ಆಲ್-ಗ್ರಿಪ್ AWD ಸಿಸ್ಟಮ್, ಟೊಯೋಟಾ ಅರ್ಬನ್ ಕ್ರೂಸರ್ ಹೈರೈಡರ್ ಹೊರತುಪಡಿಸಿ ಈ ವಿಭಾಗದಲ್ಲಿ ವೈಶಿಷ್ಟ್ಯಗೊಳಿಸಿದ ಏಕೈಕ SUV ಇದಾಗಿದೆ. ಹೊಸ ಗ್ರಾಂಡ್ ವಿಟಾರಾ ಇತರ ಪ್ರತಿಸ್ಪರ್ಧಿಗಳಾದ ಕಿಯಾ ಸೆಲ್ಟೋಸ್, ಸ್ಕೋಡಾ ಕುಶಾಕ್, ಫೋಕ್ಸ್‌ವ್ಯಾಗನ್ ಟೈಗುನ್, ನಿಸ್ಸಾನ್ ಕಿಕ್ಸ್ ಮತ್ತು ಎಂಜಿ ಆಸ್ಟರ್‌ಗಳೊಂದಿಗೆ ಸ್ಪರ್ಧಿಸಲಿದೆ. ಸೆಲ್ಟೋಸ್ ಮತ್ತು ಕ್ರೆಟಾವನ್ನು ಹೊರತುಪಡಿಸಿ, ಎಲ್ಲಾ ಇತರವುಗಳು ಗ್ರ್ಯಾಂಡ್ ವಿಟಾರಾದೊಂದಿಗೆ ಮಾರುತಿ ಸುಜುಕಿ ಸೇರಿದಂತೆ ಪೆಟ್ರೋಲ್ ಎಂಜಿನ್‌ಗಳನ್ನು ಮಾತ್ರ ನೀಡುತ್ತವೆ.

ಹೊಸ ಗ್ರ್ಯಾಂಡ್ ವಿಟಾರಾ ಎಸ್‍ಯುವಿಯಲ್ಲಿ ಅತ್ಯಾಧುನಿಕ ಸುರಕ್ಷತಾ ಫೀಚರ್ಸ್ ಗಳನ್ನು ನೀಡಿದೆ. ಇದರಲ್ಲಿ 6 ಏರ್ ಬ್ಯಾಗ್ ಗಳು, 360 ಕ್ಯಾಮೆರಾ ವ್ಯೂ, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP), ಹಿಲ್ ಹೋಲ್ಡ್ ಅಸಿಸ್ಟ್, ಹಿಲ್ ಡಿಸೆಂಟ್ ಕಂಟ್ರೋಲ್, 3 ಪಾಯಿಂಟ್ ELR ಸೀಟ್ ಬೆಲ್ಟ್‌ಗಳು ಮತ್ತು ಇಂಜಿನ್ ಇಮೊಬಿಲೈಸರ್ ಅನ್ನು ಹೊಂದಿದೆ.