ಜೈಲರ್ ಸಿನಿಮಾ ಸೆಟ್ ನಲ್ಲಿ ಶಿವಣ್ಣ; ಎಕ್ಸ್ಕ್ಲೂಸಿವ್ ಫೋಟೋ ರಿವೀಲ್
ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿಚ 'ಜೈಲರ್' ಸಿನಿಮಾದಲ್ಲಿ ಸೆಂಚುರಿ ಸ್ಟಾರ್ ಡಾ.ಶಿವರಾಜ್ ಕುಮಾರ್ ಕೂಡಾ ಅಭಿನಯಿಸಲಿದ್ದಾರೆ ಎಂದು ಹೇಳಲಾಗುತಿತ್ತು. ಅದು ಇದೀಗ ನಿಜವಾಗಿದೆ. ಜೈಲರ್ ಸಿನಿಮಾ ಸೆಟ್ ನ ಶಿವಣ್ಣನ ಎಕ್ಸ್ಕ್ಲೂಸಿವ್ ಫೋಟೋ ರಿವೀಲ್ ಆಗಿದೆ. ಈ ಚಿತ್ರವನ್ನು ನಿರ್ಮಿಸುತ್ತಿರುವ ಸನ್ ಪಿಕ್ಚರ್ಸ್ ಸಂಸ್ಥೆ ಶಿವಣ್ಣನ ಮೊದಲ ಸೆಟ್ ನ ಫೋಟೋವೊಂದನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ.