ಇಂದು ರಾಜ್ಯಾದ್ಯಂತ 'ಎಸ್‌. ಪಿ. ಸಾಂಗ್ಲಿಯಾನ- 2' ರೀ ರಿಲೀಸ್

ಇಂದು ರಾಜ್ಯಾದ್ಯಂತ 'ಎಸ್‌. ಪಿ. ಸಾಂಗ್ಲಿಯಾನ- 2' ರೀ ರಿಲೀಸ್

ದಿ. ನಟ ಶಂಕರ್‌ನಾಗ್ ನಟನೆಯ ಸೂಪರ್ ಹಿಟ್ ಸಿನಿಮಾ 'ಎಸ್‌. ಪಿ ಸಾಂಗ್ಲಿಯಾನ- 2'. ದಶಕಗಳ ನಂತರ ಹೊಸ ತಂತ್ರಜ್ಞಾನದಲ್ಲಿ ಈ ಸಿನಿಮಾ ಇಂದು(ನ.18) ರಾಜ್ಯಾದ್ಯಂತ ರೀ ರಿಲೀಸ್ ಆಗಿದೆ. 32 ವರ್ಷಗಳ ಹಿಂದೆ ಬಾಕ್ಸಾಫೀಸ್ ಶೇಕ್ ಮಾಡಿದ್ದ ಚಿತ್ರವನ್ನು ಮತ್ತೆ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ಮತ್ತೆ ತೆರೆಗೆ ಬರ್ತಿದೆ. ಮಲ್ಟಿಪ್ಲೆಕ್ಸ್ ಸೇರಿದಂತೆ ರಾಜ್ಯಾದ್ಯಂತ 25ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ 'ಎಸ್‌. ಪಿ ಸಾಂಗ್ಲಿಯಾನ- 2' ಸಿನಿಮಾ ರೀ ರಿಲೀಸ್ ಆಗ್ತಿದೆ.