ಗಂಗಾವತಿ: ಇಕ್ಬಾಲ್ ಅನ್ಸಾರಿಯಿಂದ ಚುನಾವಣಾ ಪ್ರಚಾರ ಆರಂಭ

ಗಂಗಾವತಿ:2023 ರ ವಿಧಾನಸಭಾ ಚುನಾವಣೆ ಘೋಷಣೆಗೂ ಮುನ್ನವೇ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ನಗರದಲ್ಲಿ ಚುನಾವಣೆ ವಾರ್ಡುವಾರು ಪ್ರಚಾರವನ್ನು ಗುರುವಾರದಿಂದ ಪ್ರಾರಂಭಿಸಿದ್ದಾರೆ.
ಲೇಬಗೇರಾ ಮತ್ತು ಕುಷ್ಟಗಿ ಭೇಟಿಯ ಸಂದರ್ಭದಲ್ಲಿ ಮಾಜಿ ಸಿಎಂ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಚುನಾವಣೆಗೆ ಸ್ಪರ್ಧಿಸುವ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದ್ದರು.
ಗುರುವಾರ ಅಧಿಕೃತವಾಗಿ ತಮ್ಮ ಬೆಂಬಲಿಗರ ಜತೆ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಒಂದನೇಯ ವಾರ್ಡು ಪಂಪಾನಗರದಿಂದ ಮನೆಮನೆಗೆ ತೆರಳಿ ಎರಡು ಭಾರಿ ಗೆದ್ದು ಗಂಗಾವತಿ ಸಮಗ್ರ ಪ್ರಗತಿಗೆ ಕೆಲಸ ಮಾಡಿದ್ದು ಪುನಃ ಆಶೀರ್ವಾದ ಮಾಡುವಂತೆ ಮನವಿ ಮಾಡಿದರು.ಇದೇ ಸಂದರ್ಭದಲ್ಲಿ ಅಭಿಮಾನಿಗಳು ಬೃಹತ್ ಗಾತ್ರದ ಹೂವಿನ ಹಾರ ಹಾಕಿ ಕಾರಿನ ಮೇಲೆ ಹೂವನ್ನು ಸುರುವಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಜಿ.ಪಂ.ಮಾಜಿ ಸದಸ್ಯ ಅಮರೇಶ ಗೋನಾಳ್,ನಗರ ಕಾಂಗ್ರೆಸ್ ಅಧ್ಯಕ್ಷ ಶ್ಯಾಮೀದ ಮನಿಯಾರ, ನಗರಸಭಾ ಸದಸ್ಯ ಮನೋಹರಸ್ವಾಮಿ,ಜಯಕರ್ನಾಟಕ ಸಂಘಟನೆಯ ಬಳ್ಳಾರಿ ರಾಮಣ್ಣ ನಾಯಕ,ಎಸ್.ಬಿ.ಖಾದ್ರಿ ಸೇರಿದಂತೆ ಕಾರ್ಯಕರ್ತರು ಭಾಗವಹಿದ್ದರು.