ಗದಗ | ಅನಿಲ್‌ ಮೆಣಸಿಕಾಯಿ ಬೆಂಬಲಿಸಿ ಬಿಜೆಪಿಗೆ ಸೇರ್ಪಡೆ

ಗದಗ | ಅನಿಲ್‌ ಮೆಣಸಿಕಾಯಿ ಬೆಂಬಲಿಸಿ ಬಿಜೆಪಿಗೆ ಸೇರ್ಪಡೆ

ದಗ: ಬಿಜೆಪಿ ನೂತನ ಜಿಲ್ಲಾ ಕಾರ್ಯಾಲಯದ‌ ಉದ್ಘಾಟನೆ ಕಾರ್ಯಕ್ರಮದಲ್ಲಿ ಗದಗ ಮತಕ್ಷೇತ್ರದ ಯುವಮುಖಂಡ ಅನಿಲ್‌ ಮೆಣಸಿನಕಾಯಿ ಅವರನ್ನು ಬೆಂಬಲಿಸಿ ಕ್ಷೇತ್ರದ ಕಲ್ಲೂರ, ನೀಲಗುಂದ, ಕಳಸಾಪುರ, ಕುರ್ತಕೋಟಿ, ಅಸುಂಡಿ ಹಾಗೂ ಗದಗ-ಬೆಟಗೇರಿ ನಗರಸಭೆ ‌ವ್ಯಾಪ್ತಿಯ ಸಮಗಾರ ಹರಳಯ್ಯ ಸಮಾಜದವರು ಸೇರಿದಂತೆ 500ಕ್ಕೂ ಹೆಚ್ಚು ಜನರು ಗುರುವಾರ ಕಾಂಗ್ರೆಸ್ ತೊರೆದು ಬಿಜೆಪಿ‌ಗೆ ಸೇರ್ಪ‍ಡೆಗೊಂಡರು.

ಬಿಜೆಪಿ ಗದಗ ಜಿಲ್ಲಾ ಘಟಕದ ಅಧ್ಯಕ್ಷ‌ ಮುತ್ತಣ್ಣ ಲಿಂಗನಗೌಡರ, ಶಾಸಕರಾದ ಕಳಕಪ್ಪ‌ ಬಂಡಿ, ರಾಮಣ್ಣ‌ ಲಮಾಣಿ, ವಿಧಾನ ಪರಿಷತ್‌ ಸದಸ್ಯ ಎಸ್.ವಿ. ಸಂಕನೂರ, ಎಂಸಿಎ ಅಧ್ಯಕ್ಷ ಎಂ.ಎಸ್.ಕರಿಗೌಡ್ರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿದ್ದು‌ ಪಲ್ಲೇದ, ರಾಜು ಕುರಡಗಿ, ಕಾಂತಿಲಾಲ‌ ಬನ್ಸಾಲಿ, ಶ್ರೀಪತಿ ಉಡುಪಿ, ಸಂಗಮೇಶ‌ ದುಂದೂರ ಸಮ್ಮುಖದಲ್ಲಿ ವಲಸಿಗರನ್ನು ಸ್ವಾಗತಿಸಲಾಯಿತು.

ಪ್ರಧಾನಮಂತ್ರಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಅವರು ನೀಡಿರುವ ಜನಪರ ಆಡಳಿತ, ಜನಸಾಮಾನ್ಯರಿಗೆ ರೂಪಿಸಿದ ಹಲವಾರು ಯೋಜನೆಗಳನ್ನು‌ ಮೆಚ್ಚಿ ಬಿಜೆಪಿ ಸೇರ್ಪಡೆಯಾಗಿದ್ದೇವೆ ಎಂದು ಅವರು ಹೇಳಿದರು.

ಚಿಂಚಲಿ ಗ್ರಾಮ ಪಂಚಾಯ್ತಿ ಸದಸ್ಯ ‌ಚಂದ್ರಶೇಖರ‌ ಹರಿಜನ, ಹಿರಿಯರಾದ ಪರಸಪ್ಪ‌ ಬೂಸಣ್ಣವರ, ನಾರಾಯಣಪ್ಪ‌ ಚಿಂಚಲಿ, ಕಾಸಪ್ಪ ಶಿವಳ್ಳಿ, ಮಲ್ಲಪ್ಪ ಸುಂಕದ, ರಜಾಕಸಾಬ ನದಾಫ್, ನರಸಪ್ಪ ದೊಡ್ಡಮನಿ, ನಿಂಗನಗೌಡ್ರ ತಿಪ್ಪನಗೌಡ್ರ, ಚನ್ನಪ್ಪ ಬಡಿಗೇರ, ರೇವಪ್ಪ ಘೋಡಕೆ, ವಿರೂಪಾಕ್ಷ ಬಡಿಗೇರ, ಬಸವರಾಜ ಸಾಶ್ವಿಹಳ್ಳಿಮಠ, ಚಂದ್ರಕಾಂತ ಅಣ್ಣಿಗೇರಿ, ರಾಜಶೇಖರ ಮುಳಗುಂದ, ಅಶೋಕ ಶಲವಡಿ, ಮಹೇಶ ವಾಲೀಕಾರ ಸೇರಿದಂತೆ ಹಲವರು ಬಿಜೆಪಿ ಸೇರಿದರು.

ಮುಖಂಡರಾದ ಶರಣು ಚಿಂಚಲಿ, ದ್ಯಾಮಣ್ಣ ನೀಲಗುಂದ, ಭದ್ರೇಶ ಕುಸಲಾಪೂರ, ಹರೀಶ ಮೈಲಾರಿ, ಬೂದಪ್ಪ ಹಳ್ಳಿ, ಪರಮೇಶ ನಾಯಕ, ಸತ್ಯನಾರಾಯಣ ಘೋಡಕೆ, ಮುತ್ತಣ್ಣ ಇಟಗಿಮಠ ಇದ್ದರು.