ರಾಜ್ಯದಲ್ಲಿ ಚುನಾವಣೆಗೆ ಮುನ್ನವೇ ಆಣೆ-ಪ್ರಮಾಣ ಪಾಲಿಟಿಕ್ಸ್ ಶುರು: ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ವೀಡಿಯೋ ವೈರಲ್

ರಾಜ್ಯದಲ್ಲಿ ಚುನಾವಣೆಗೆ ಮುನ್ನವೇ ಆಣೆ-ಪ್ರಮಾಣ ಪಾಲಿಟಿಕ್ಸ್ ಶುರು: ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ವೀಡಿಯೋ ವೈರಲ್

ಕೋಲಾರ: ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ( 2023 Karnataka Assembly Election ) ಮುನ್ನಲೇ ಆಣೆ ಪ್ರಮಾಣದ ಪಾಲಿಟಿಕ್ಸ್ ಶುರುವಾಗಿದೆ. ಅದರಲ್ಲೂ ಕೋಲಾರ ಜಿಲ್ಲೆಯಲ್ಲಿ ಸಿದ್ದರಾಮಯ್ಯ ಕಣಕ್ಕೆ ಇಳಿಯೋದು ಫಿಕ್ಸ್ ಆಗುತ್ತಿದ್ದಂತೇ, ರಾಜಕೀಯ ಚಟುವಟಿಕೆ ಚುರುಕು ಪಡೆದಿದೆ.

ಇದೇ ವೇಳೆಯಲ್ಲಿ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ( Minister Munirathna ), ಬಂಗಾರ ಪೇಟೆ ಕ್ಷೇತರಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಿಗೆ ಟಿಕೆಟ್ ಕೈ ತಪ್ಪಿದರೇ ಬಿಜೆಪಿ ಬಿಟ್ಟು ಹೋಗದಂತೆ ಕಾರ್ಯಕರ್ತರಿಂದ ಮಾಡಿಸಿಕೊಂಡಂತ ಆಣೆ ಪ್ರಮಾಣದ ವೀಡಿಯೋ ಈಗ ವೈರಲ್ ಆಗಿದೆ.

ಕೋಲಾರ ಜಿಲ್ಲೆಯ ವಿಧಾನಸಭಾ ಕ್ಷೇತ್ರದಿಂದ ವಿಪಕ್ಷ ನಾಯಕ ಸಿದ್ಧರಾಮಯ್ಯ ( Siddaramaiah ) ಕಣಕ್ಕೆ ಇಳಿಯೋದು ಖಚಿತಗೊಂಡ ನಂತ್ರ, ಜಿಲ್ಲಾ ರಾಜಕೀಯ ರಂಗದ ಚಿತ್ರಣವೇ ಬದಲಾವಣೆಯಾಗಿದೆ. ಕೋಲಾರ ಜಿಲ್ಲೆಯ ಬಂಗಾರ ಪೇಟೆ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಕೂಡ ಹೆಚ್ಚಾಗಿದೆ. ಅಲ್ಲದೇ ಕ್ಷೇತ್ರದಲ್ಲಿ ಬಿಜೆಪಿಯ ಭಿನ್ನಮತ ಸ್ಪೋಟಗೊಳ್ಳುವಂತ ಸುಳಿವು ಉಸ್ತುವಾರಿ ಸಚಿವ ಮುನಿರತ್ನಗೆ ಸಿಕ್ಕಿತ್ತು.

ಈ ಹಿನ್ನಲೆಯಲ್ಲಿಯೇ ಜಿಲ್ಲೆಯ ಬಿಜೆಪಿ ಕಾರ್ಯಕರ್ತರು ( BJP Worker ), ಮುಖಂಡರ ಸಭೆಯನ್ನು ನಡೆಸಿರುವಂತ ಸಚಿವ ಮುನಿರತ್ನ ಅವರು, ಟಿಕೆಟ್ ಕೈ ತಪ್ಪಿದರೇ ಪಕ್ಷ ಬಿಟ್ಟು ಹೋಗದಂತೆ ಬಿಜೆಪಿ ಮುಖಂಡರಿಂದ ಆಣೆ ಪ್ರಮಾಣ ಮಾಡಿಸಿಕೊಂಡಿದ್ದಾರೆ. ಟಿಕೆಟ್ ಕೈ ತಪ್ಪಿದರೇನು ಬಿಜೆಪಿ ಪಕ್ಷಕ್ಕೆ ಅಧಿಕಾರ ಸಿಕ್ಕರೇ ಎಲ್ಲರಿಗೂ ಸಿಕ್ಕಂತೆ. ಆ ನಿಟ್ಟಿನಲ್ಲಿ ಯೋಚಿಸುವಂತೆ ಮನವೊಲಿಕೆ ಮಾಡಿದ್ದಾರೆ ಎನ್ನಲಾಗಿದೆ.

ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಬಿಜೆಪಿ ಮುಖಂಡರಿಗೆ ಆಣೆ ಪ್ರಮಾಣ ಮಾಡಿಸಿಕೊಂಡಿರೋ ವೀಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಅಲ್ಲದೇ ಚುನಾವಣೆಗೆ ಮುನ್ನವೇ ಶುರುವಾದಂತ ಆಣೆ ಪ್ರಮಾಣದ ಪಾಲಿಟಿಕ್ಸ್ ಕಂಡು ಮತದಾರ ಪ್ರಭುಗಳು ಅಚ್ಚರಿಗೊಂಡಿದ್ದಾರೆ.