ಕುಣಿಗಲ್ ಕುಕ್ಕರ್' ಪ್ರಕರಣದ ಸಮಗ್ರ ತನಿಖೆ ನಡೆಸುವುದಾಗಿ 'ಸಿಎಂ ಬೊಮ್ಮಾಯಿ' ಘೋಷಣೆ

ಬೆಂಗಳೂರು : ಕುಣಿಗಲ್ ಕುಕ್ಕರ್ ಪ್ರಕರಣದಲ್ಲಿ ಸಮಗ್ರ ತನಿಖೆ ನಡೆಸುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಸಿಎಂ ಕುಣಿಗಲ್ನಲ್ಲಿ ಶಾಸಕರ ಫೋಟೋ ಇರುವ ಕುಕ್ಕರ್ಗಳನ್ನು ವಶಪಡಿಸಿಕೊಂಡು ನಾಲ್ಕೈದು ಜನರ ಮೇಲೆ ದಂಡ ಹಾಕಿದ್ದಾರೆ.
ಕಾಂಗ್ರೆಸ್ ನವರಿಗೆ ತಾವು ಸೋಲುತ್ತೇವೆ ಅಂತ ಗ್ಯಾರಂಟಿ ಆಗಿಹೋಗಿದೆ. ಕುಣಿಗಲ್ ಕುಕ್ಕರ್ ಪ್ರಕರಣದಲ್ಲಿ ತನಿಖೆ ಆಗಲಿದೆ ಎಂದು ತಿಳಿಸಿದ್ದಾರೆ. ನಾವು ಅವರ ವಿರುದ್ಧ ನೂರು ದೂರು ಕೊಡಬಹುದು. ಇದು ಕೆಳಮಟ್ಟದ ರಾಜಕಾರಣ ಆಗುತ್ತೆ. ಎಲ್ಲವನ್ನೂ ಜನ ತೀರ್ಮಾನ ಮಾಡ್ತಾರೆ ಎಂದರು. ಕಾಂಗ್ರೆಸ್ ನವರಿಗೆ ಕುಕ್ಕರ್ ಎಂದರೆ ಬಹಳ ಇಷ್ಟ ಎಂದು ಸಿಎಂ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದ್ದಾರೆ.ಕಾಂಗ್ರೆಸ್ ನವರು ಚುನಾವಣೆ ಸಮಯದಲ್ಲಿ ಕುಕ್ಕರ್ ಕೊಟ್ಟು ಗೆಲ್ಲುತ್ತಾರೆ, ಹಾಗಾಗಿ ಕುಕ್ಕರ್ ಅಂದರೆ ಬಹಳ ಇಷ್ಟ. ಅದರಲ್ಲಿ ಬಾಂಬ್ ಇಟ್ಟರೂ ಅಲ್ಲ ಫ್ರೆಶರ್ ಕುಕ್ಕರ್ ಎನ್ನುತ್ತಾರೆ ಎಂದು ಸಿಎಂ ಲೇವಡಿ ಮಾಡಿದರು.
ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್ ದೂರು ನೀಡಿರುವುದು ಅತ್ಯಂತ ಕೀಳಿ ಮಟ್ಟದ್ದು, ಸುಳ್ಳು ಹಾಗೂ ರಾಜಕೀಯ ಪ್ರೇರಿತ ಆರೋಪ ಮಾಡಿ ಜನರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಜನರಿಗೆ ಎಲ್ಲಾ ಗೊತ್ತಿದೆ. ಎಲ್ಲವೂ ಕಾನೂನಿನ ಪ್ರಕಾರ ನಡೆಯಲಿದೆ ಎಂದರು.