ಕಿವಿ ಮೇಲೆ ಹೂವಿಟ್ಟುಕೊಂಡು ಬಂದ ಕಾಂಗ್ರೆಸ್ ಸದಸ್ಯರು

ಕಿವಿ ಮೇಲೆ ಹೂವಿಟ್ಟುಕೊಂಡು ಬಂದ ಕಾಂಗ್ರೆಸ್ ಸದಸ್ಯರು

ಬೆಂಗಳೂರು,ಫೆ.17- ಅನುಷ್ಠಾನ ಸಾಧುವಲ್ಲದ ಭರವಸೆಗಳನ್ನು ಬಜೆಟ್ನಲ್ಲಿ ಘೋಷಣೆ ಮಾಡುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜನರನ್ನು ಮೂರ್ಖರನ್ನಾಗಿಸಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಸದಸ್ಯರು ಕಿವಿಯ ಮೇಲೆ ಚಂಡು ಹೂವನ್ನು ಇಟ್ಟುಕೊಳ್ಳುವ ಮೂಲಕ ಲೇವಡಿ ಮಾಡಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸಭೆಯಲ್ಲಿ ಬಜೆಟ್ ಮಂಡನೆ ಮಾಡುವ ವೇಳೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ನ ಅನೇಕ ಸದಸ್ಯರು ತಮ್ಮ ಕಿವಿಯ ಮೇಲೆ ಹೂವನ್ನಿಟ್ಟು ಕೊಂಡು ಕಲಾಪದಲ್ಲಿ ಭಾಗವಹಿಸಿದ್ದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಪಕ್ಷಗಳ ಸದಸ್ಯರು ನಡವಳಿಕಗೆ ಆಕ್ಷೇಪ ವ್ಯಕ್ತಪಡಿಸಿದರು.

ಅದೇ ರೀತಿ ವಿಧಾನ ಪರಿಷತ್ನಲ್ಲೂ ಕಾಂಗ್ರೆಸ್ ಸದಸ್ಯರು ಕಿವಿ ಮೇಲೆ ಹೂವನ್ನಿಟ್ಟುಕೊಂಡು ಭಾಗವಹಿಸಿದ್ದರು. ಬಿಜೆಪಿ ಸದಸ್ಯರು 60 ವರ್ಷಗಳಿಂದ ಕಾಂಗ್ರೆಸ್ ಜನರ ಕಿವಿ ಮೇಲೆ ಹೂವನ್ನಿಟ್ಟುತ್ತಾ ಬಂದಿದೆ ಎಂದು ತಿರುಗೇಟು ನೀಡಿದರು. ಇದರಿಂದ ಕೆಲ ಕಾಲ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.