ಕಾಂಗ್ರೆಸ್ ಟಿಕೆಟ್‌ಗಾಗಿ ಬಿಗ್ ಫೈಟ್ : KPCC ಕಚೇರಿ ಎದುರು ವಿಷ ಸೇವಿಸಲು ಯತ್ನಿಸಿದ ʻಕೈʼ ಕಾರ್ಯಕರ್ತ
ಬೆಂಗಳೂರು: ಮುಂದಿನ ವಿಧಾನ ಸಭೆ ಚುನಾವಣೆಗಾಗಿ ಕಾಂಗ್ರೆಸ್ ಪಾಳಯದಲ್ಲಿ ಟಿಕೆಟ್‌ಗಾಗಿ ಬಿಗ್ ಫೈಟ್ ನಡೆಯುತ್ತಿದ್ದು, ತರೀಕೆರೆಯಲ್ಲಿ ಗೋಪಿಕೃಷ್ಣ ಅವರಿಗೆ ʻಕೈ ʼಟಿಕೆಟ್ ನೀಡಬೇಕೆಂದು ಕೆಪಿಸಿಸಿ ಕಚೇರಿಯೆದುರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ.
ಈಗಾಗಲೇ ಮುಂದಿನ ವಿಧಾನ ಸಭೆ ಚುನಾವಣೆಗಾಗಿ ಕಾಂಗ್ರೆಸ್ ಮೊದಲ ಪಟ್ಟಿಯನ್ನುಕಾಂಗ್ರೆಸ್ ಬಿಡುಗಡೆ ಮಾಡಿದ್ದು ಎರಡನೇ ಪಟ್ಟಿಯಲ್ಲಿ ಹೆಸರು ಖಚಿತವಾಗಿಲ್ಲ ಎಂದು ದೃಢಪಟ್ಟ ಹಾಗೂ ಅನುಮಾನವಿರುವ ಆಕಾಂಕ್ಷಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ದಾಸರಹಳ್ಳಿ, ಮೊಳಕಾಲ್ಮೂರು, ತರಿಕೇರೆ, ಚಿಕ್ಕಮಗಳೂರು, ಹರಿಹರ ಸೇರಿದಂತೆ 10 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಂಡಾಯ ಎದ್ದಿದ್ದು, ಕೆಪಿಸಿಸಿ ಕಚೇರಿ ಬಳಿ ಜಮಾಯಿಸಿದ ಕಾರ್ಯಕರ್ತರು ರಸ್ತೆಯಲ್ಲೇ ವಿಷದ ಬಾಟಲಿ ಹಿಡಿದು ಆತ್ಮಹತ್ಯೆಗೆ ಮುಂದಾಗಿದ್ದಾರೆ.
ಅಲ್ಲೇ ಇದ್ದ ಪೊಲೀಸರು ಬಾಟಲಿಯನ್ನು ವಶಕ್ಕೆ ಪಡೆದಿದ್ದಾರೆ. ಅಷ್ಟೇ ಅಲ್ಲದೇ ಪ್ರತಿಭಟನೆ ನಿರತರು ಕಚೇರಿಗೆ ಆಗಮಿಸಿದ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರನ್ನೂ ಬಿಡದಂತೆ ಸುತ್ತುವರೆದಿದ್ದಲ್ಲದೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಮೊಳಕಾಲ್ಮೂರು ಕಾರ್ಯಕರ್ತರರೂ ಆಗಮಿಸಿದರು. ಇದೇ ವೇಳೆ ಗೋಪಾಲಕೃಷ್ಣ ಕಾಂಗ್ರೆಸ್ ಸೇರ್ಪಡೆಗೆ ಆಕ್ರೋಶಿಸಿದರು. ಮೊಳಕಾಲ್ಮೂರು ಟಿಕೆಟ್ ಆಕಾಂಕ್ಷಿ ಆಗಿರುವ ಯೋಗೇಶ್ ಬಾಬು ಬದಲಿಗೆ ಈಗ ಕಾಂಗ್ರೆಸ್ ನಾಯಕರು ಗೋಪಾಲಕೃಷ್ಣಗೆ ಮಣೆ ಹಾಕುತ್ತಿದ್ದಾರೆ ಎಂದು ಕೆಂಡಾಮಂಡಲಾಗಿದ್ದಾರೆ.