ಕಲಬುರಗಿಯ 'ಥಿಯೇಟರ್ ಮೇಲೆ ಕಲ್ಲುತೂರಾಟ' : 14 ಜನರ ವಿರುದ್ಧ ಎಫ್‌ಐಆರ್

ಕಲಬುರಗಿಯ 'ಥಿಯೇಟರ್ ಮೇಲೆ ಕಲ್ಲುತೂರಾಟ' : 14 ಜನರ ವಿರುದ್ಧ ಎಫ್‌ಐಆರ್

ಲಬುರ್ಗಿ : ಪಠಾಣ್‌ ಚಿತ್ರ ಪ್ರದರ್ಶನ ವೇಳೆ ಕಲಬುರಗಿಯ ಥಿಯೇಟರ್ ಮೇಲೆ ಕಲ್ಲುತೂರಾಟ ಮಾಡಿದ 14 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಕಲಬುರಗಿ ಜಿಲ್ಲೆಯ ಮಲ್ಟಿಫ್ಲೆಕ್ಸ್‌ ಥಿಯೇಟರ್ ನಲ್ಲಿ ನಿನ್ನೆ ಪಠಾಣ್‌ ಚಿತ್ರ ಪ್ರದರ್ಶನ ನಡೆಯುತ್ತಿದ್ದ ವೇಳೆ ಪ್ರತಿಭಟನೆ ನಡೆಸಲಾಗಿತ್ತು. ಪ್ರತಿಭಟನೆ ವೇಳೆ ಥಿಯೇಟರ್‌ ಗೇಟ್‌ಗಳನ್ನು ತಳ್ಳೊದಕ್ಕೆ ಕಾರ್ಯಕರ್ತರು ಮುಂದಾದರು, ಕೂಡಲೇ ಪ್ರತಿಭಟನೆ ನಿಯಂತ್ರಿಸುವುದಕ್ಕಾಗಿ ಪೊಲೀಸರನ್ನು ಸ್ಥಳಕ್ಕೆ ಆಗಮಿಸಿದರು.

ಆ ಪ್ರತಿಭಟನೆಯಲ್ಲಿ ನೂಕಾಟದ ವೇಳೆ ಹಿಂದೂ ಸೇನಾ ಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ಕೈಗೆ ಗಂಭೀರ ಗಾಯವಾಗಿತ್ತು.ಇದ್ರಿಂದ ಉದ್ರಿಕ್ತಗೊಂಡ ಹಿಂದೂ ಸೇನಾ ಜಾಗೃತಿ ವೇದಿಕೆ ಕಾರ್ಯಕರ್ತರು ಥಿಯೇಟರ್ ಮೇಲೆ ಕಲ್ಲುತೂರಾಟ ಮಾಡಿದ್ದರು. ಇದೀಗ ಕಲ್ಲು ತೂರಾಟ ಮಾಡಿದ 14 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಯಾದ್ಯಂತ ಬಿಗಿ ಬಂದೋಬಸ್ತ್‌ ಮಾಡಲಾಗಿದೆ.