ಕರ್ನಾಟಕ ಸ್ತಬ್ಧ ಚಿತ್ರ ಗಣರಾಜ್ಯೋತ್ಸವ ಪರೇಡ್ ಗೆ ನಿರಾಕರಣೆ ವಿಚಾರ: ಈ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದೇನು ಗೊತ್ತಾ

ಕರ್ನಾಟಕ ಸ್ತಬ್ಧ ಚಿತ್ರ ಗಣರಾಜ್ಯೋತ್ಸವ ಪರೇಡ್ ಗೆ ನಿರಾಕರಣೆ ವಿಚಾರ: ಈ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದೇನು ಗೊತ್ತಾ

ಚಿತ್ರದುರ್ಗ: ಕರ್ನಾಟಕ ಸ್ತಬ್ಧ ಚಿತ್ರವನ್ನು ಈ ಬಾರಿ ಗಣರಾಜ್ಯೋತ್ಸವ ಪರೇಡ್ ನಿಂದ ನಿರಾಕರಿಸಲಾಗಿದೆ. ಈ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಏನು ಹೇಳಿದರು ಅಂತ ಮುಂದೆ ಓದಿ.

ಇಂದು ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಗಣರಾಜ್ಯೋತ್ಸವ ಪರೇಡ್ ಗೆ ಸ್ತಬ್ಧ ಚಿತ್ರ ಆಯ್ಕೆಗಾಗಿ ಒಂದು ನಿಯಮವಿದೆ.

13 ರಾಜ್ಯಗಳ ಸ್ತಬ್ದಚಿತ್ರವನ್ನು ಪ್ರತಿಬಾರಿ ಗಣರಾಜ್ಯೋತ್ಸವ ಪರೇಡ್ ಗೆ ಆಯ್ಕೆ ಮಾಡಲಾಗುತ್ತದೆ ಎಂದರು.

36 ಸ್ತಬ್ಧ ಚಿತ್ರಗಳ ಪೈಕಿ 12 ಸ್ತಬ್ದ ಚಿತ್ರಗಳನ್ನು ಮಾತ್ರವೇ ಪ್ರತಿ ಬಾರಿ ಆಯ್ಕೆ ಮಾಡಲಾಗುತ್ತದೆ. ಇದನ್ನು ತಜ್ಞರ ಸಮಿತಿಯಿಂದ ಆಯ್ಕೆ ನಡೆಯುತ್ತದೆ. ನಾನು ಕೂಡ ರಾಜ್ಯದ ಸ್ತಬ್ದ ಚಿತ್ರಕ್ಕೆ ಅವಕಾಶ ಕಲ್ಪಿಸೋ ಪ್ರಯತ್ನ ನಡೆಸೋದಾಗಿ ತಿಳಿಸಿದರು.