ಉದ್ಯೋಗಿಗಳಿಗೆ ಭರ್ಜರಿ ಗಿಫ್ಟ್: ಕಂಪನಿ ಬೆಳವಣಿಗೆಗೆ ಕಾರಣರಾದ ನೌಕರರಿಗೆ ಕಾರ್ ಕೊಟ್ಟ ಮಾಲೀಕ

ಉದ್ಯೋಗಿಗಳಿಗೆ ಭರ್ಜರಿ ಗಿಫ್ಟ್: ಕಂಪನಿ ಬೆಳವಣಿಗೆಗೆ ಕಾರಣರಾದ ನೌಕರರಿಗೆ ಕಾರ್ ಕೊಟ್ಟ ಮಾಲೀಕ

ಹಮದಾಬಾದ್: ಅಹಮದಾಬಾದ್‌ ನ ಐಟಿ ಸಂಸ್ಥೆಯು ಉದ್ಯೋಗಿಗಳಿಗೆ ಕಾರ್ ಗಳನ್ನು ನೀಡಿ ಗೌರವಿಸಿದೆ, ತ್ರಿಧ್ಯಾ ಟೆಕ್ ಐಟಿ ಸಂಸ್ಥೆಯು ಕಂಪನಿಯ ಬೆಳವಣಿಗೆಗೆ ಕೊಡುಗೆ ನೀಡಿದ 13 ಉದ್ಯೋಗಿಗಳಿಗೆ ಕಾರ್ ಗಳನ್ನು ಉಡುಗೊರೆಯಾಗಿ ನೀಡಿದೆ.

ಉದ್ಯೋಗಿಗಳ ಕಠಿಣ ಪರಿಶ್ರಮ ಅವರ ಸಮರ್ಪಣೆಗಾಗಿ ಶ್ಲಾಘನೆಯ ಸಂಕೇತವಾಗಿ ಕಾರ್ ನೀಡಲಾಗಿದೆ.

ತ್ರಿಧ್ಯಾ ಟೆಕ್ ಡಿಜಿಟಲ್ ಟ್ರಾನ್ಸ್‌ ಫರ್ಮೇಷನ್ ಸೇವೆಗಳನ್ನು ಒದಗಿಸುತ್ತದೆ. ಈ ಉದ್ಯೋಗಿಗಳು ಮೊದಲಿನಿಂದಲೂ ಈ ಐಟಿ ಕಂಪನಿಯೊಂದಿಗೆ ಸಂಬಂಧ ಹೊಂದಿದ್ದರಿಂದ ಮತ್ತು ಅವರ ಕಠಿಣ ಪರಿಶ್ರಮಕ್ಕಾಗಿ ಅವರನ್ನು ಸನ್ಮಾನಿಸಿದೆ.

ತ್ರಿಧ್ಯಾ ಟೆಕ್‌ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ನಿರ್ದೇಶಕ ರಮೇಶ್ ಮರಂದ್ ಅವರು ಮಾತನಾಡಿ, ನಮ್ಮ ಉದ್ಯೋಗಿಗಳನ್ನು ಗುರುತಿಸುವ ಕಾರ್ಯಕ್ರಮದ ಭಾಗವಾಗಿ ನಾವು ಉದ್ಯೋಗಿಗಳಿಗೆ ಕಾರುಗಳನ್ನು ಉಡುಗೊರೆಯಾಗಿ ನೀಡುತ್ತಿದ್ದೇವೆ. ನಾವು ಸೃಷ್ಟಿಸಿದ ಸಂಪತ್ತನ್ನು ನಮ್ಮ ಉದ್ಯೋಗಿಗಳೊಂದಿಗೆ ಹಂಚಿಕೊಳ್ಳಲು ಈ ಕ್ರಮಕೈಗೊಂಡಿದ್ದೇವೆ ಎಂದರು.