ಉದ್ಯೋಗಾಂಕ್ಷಿಗಳೇ ಗಮನಿಸಿ : 'ನಮ್ಮ ಮೆಟ್ರೋ'ದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಏ.24 ಕೊನೆಯ ದಿನಾಂಕ

ಉದ್ಯೋಗಾಂಕ್ಷಿಗಳೇ ಗಮನಿಸಿ : 'ನಮ್ಮ ಮೆಟ್ರೋ'ದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಏ.24 ಕೊನೆಯ ದಿನಾಂಕ

ಬೆಂಗಳೂರು : ಉದ್ಯೋಗಾಕಾಂಕ್ಷಿಗಳಿಗೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಸಿಹಿಸುದ್ದಿ ನೀಡಿದ್ದು, ನಮ್ಮ ಮೆಟ್ರೋದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಮೇಂಟೇನರ್ಸ್, ಸ್ಟೇಷನ್ ಕಂಟ್ರೋಲರ್/ಟ್ರೇನ್ ಅಪರೇಟರ್, ಸೆಕ್ಷನ್ ಇಂಜಿನಿಯರ್ ಸೇರಿ ಒಟ್ಟು 236 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಆಸಕ್ತರು ಈಗಲೇ ಅರ್ಜಿ ಸಲ್ಲಿಸಿ.

24-4-2023 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ (Last Date). ಅಭ್ಯರ್ಥಿಗಳು ಆನ್ಲೈನ್ (Online) ಮೂಲಕ ಅರ್ಜಿ ಸಲ್ಲಿಸಬೇಕು.

ವಿದ್ಯಾರ್ಹತೆ
ಅಭ್ಯರ್ಥಿಗಳು ನಿಗದಿಪಡಿಸಿದ ಅಗತ್ಯ ಶೈಕ್ಷಣಿಕ ಅರ್ಹತೆಯಲ್ಲಿ ಕನಿಷ್ಠ ಶೇ. 50 ರಷ್ಟು ಅಂಕಗಳನ್ನು ಗಳಿಸಿರಬೇಕು. ಮೇಂಟೇನರ್ ಹುದ್ದೆಗೆ ಮೆಟ್ರಿಕ್ಯುಲೇಷನ್ ಜೊತೆಗೆ ಮುಂದಿನ ಯಾವುದೇ ಇಂಜಿನಿಯರಿಂಗ್ ಟ್ರೇಡ್ ನಲ್ಲಿ ಎರಡು ವರ್ಷಗಳ ಐಟಿಐ ಪದವಿ ಪಡೆದಿರಬೇಕು. ಸ್ಟೇಷನ್ ಕಂಟ್ರೋಲರ್ ಹುದ್ದೆಗೆ ಯಾವುದೇ ಬ್ಯಾಂಕ್ ನಲ್ಲಿ ಮೂರು ವರ್ಷಗಳ ಡಿಪ್ಲೋಮಾ ಪದವಿ ಪಡೆದಿರಬೇಕು. ಸೆಕ್ಷನ್ ಇಂಜಿನಿಯರ್ ಹುದ್ದೆಗೆ ಸಿವಿಲ್ ಇಂಜಿನಿಯರಿಂಗ್ ಅಥವಾ ತತ್ಸಮಾನ ಪದವಿ ಪಡೆದಿರಬೇಕು.

ವಯೋಮಿತಿ
ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಗರಿಷ್ಠ 35 ವರ್ಷ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 40 ವರ್ಷ. 2ಎ, 2ಬಿ ಇತರ ವರ್ಗದ ಅಭ್ಯರ್ಥಿಗೆ 38 ವರ್ಷ ನಿಗದಿಪಡಿಸಲಾಗಿದ್ದು, ಮಾಜಿ ಸೈನಿಕರಿಗೆ ಸಂಸ್ಥೆಯ ನಿಯಮಾನುಸಾರ ವಯೋಸಡಿಲಿಕೆ ಇದೆ.

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಕೊನೆಯ ದಿನ 24-04-2023
ಶುಲ್ಕ ಪಾವತಿಗೆ ಕೊನೆಯ ದಿನ 27-04-2023
ಮೆಂಟೇನರ್ ಮತ್ತು ಸೆಕ್ಷನ್ ಇಂಜಿನಿಯರ್ ಹುದ್ದೆಗಳಿಗೆ 7-06-2023 ರಂದು ಪರೀಕ್ಷೆ ನಡೆಯಲಿದೆ.
ಸ್ಟೇಷನ್ ಕಂಟ್ರೋಲರ್/ಟ್ರೇ ನ್‌ಅಪರೇಟರ್ ಹುದ್ದೆಗಳಿಗೆ 8-06-2023 ರಂದು ಪರೀಕ್ಷೆ ನಡೆಯಲಿದೆ.
ವೇತನ
ಸ್ಟೇಷನ್ ಕಂಟ್ರೋಲರ್ ಗೆ 35,000 ರೂ.ನಿಂದ 82,660 ರೂ.ಸೆಕ್ಷನ್ ಇಂಜಿನಿಯರ್ ಗೆ 40,000 ರೂ.ನಿಂದ 94,500 ರೂ.ಮೆಂಟೇನರ್ಸ್ ಗೆ 25,000 ರೂ.ನಿಂದ 59,000 ರೂ.ಮಾಸಿಕ ವೇತನ ಇರಲಿದೆ.