ಅಕ್ರಮ 'PSI' ನೇಮಕಾತಿ ಪ್ರಕರಣ : ಮತ್ತೋರ್ವ ಆರೋಪಿ ಅರೆಸ್ಟ್

ಅಕ್ರಮ 'PSI' ನೇಮಕಾತಿ ಪ್ರಕರಣ : ಮತ್ತೋರ್ವ ಆರೋಪಿ ಅರೆಸ್ಟ್

ಬೆಂಗಳೂರು : ಅಕ್ರಮ ಪಿ ಎಸ್ ಐ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ.

ಬ್ಲೂಟೂತ್ ಮೂಲಕ ಪರೀಕ್ಷೆ ಬರೆದಿದ್ದ ಸಂಜೀವ್ ಕುಮಾರ್ ಎಂಬಾತನನ್ನು ಬಂಧಿಸಲಾಗಿದ್ದು, ಈತ ಕಲ್ಯಾಣ ಕರ್ನಾಟಕ ಕೋಟದಲ್ಲಿ 14 ನೇ ರ್ಯಾಂಕ್ ಪಡೆದಿದ್ದನು.

ಅಕ್ರಮ ಪಿ ಎಸ್ ಐ ನೇಮಕಾತಿಯ ಕಿಂಗ್ ಪಿನ್ ರೌದ್ರಗೌಡ ಪಾಟೀಲ್ ನೆರವಿನಿಂದ ಈತ ಅಕ್ರಮವಾಗಿ ಪರೀಕ್ಷೆ ಬರೆದಿದ್ದನು. ಈ ಸಂಬಂಧ ಗುಲಬರ್ಗಾ ವಿವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ, ಆರೋಪಿ ಸಂಜೀವ್ ಕುಮಾರ್ ನನ್ನು ಸಿಐಡಿ ಅಧಿಕಾರಿಗಳು ಬಂಧಿಸಿ ವಿವಿ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಸಂಜೀವ್ ಕುಮಾರ್ ಜೇವರ್ಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗ್ರೂಪ್ ಡಿ ನೌಕರನಾಗಿದ್ದನು.