ಎರಡು ಲಕ್ಷ ಮೊತ್ತದ ಅಕ್ರಮ ಗಾಂಜಾ ಬೆಳೆ ಪತ್ತೆ
ಕುಂದಗೋಳ ತಾಲೂಕಿನ ಗುಡಗೇರಿ ಠಾಣೆ ಸರಹದ್ದಿನ ವ್ಯಾಪ್ತಿಯ ಭೂ.ಕೊಪ್ಪ ಗ್ರಾಮದಲ್ಲಿ ಮೂರು ಪ್ರತ್ಯೇಕ ಗಾಂಜಾ ಪ್ರಕರಣಗಳು ಪತ್ತೆಯಾಗಿದ್ದು, ಮೂವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿ ಪಿ.ಕೃಷ್ಣಕಾಂತ ಅವರು, ಮೂವರು ಆರೋಪಿಗಳಾದ ಭೂ.ಕೊಪ್ಪ ಗ್ರಾಮದ ಮಾಲತೇಶ್ ನಿಂಗಪ್ಪ ಕಿತ್ತೂರ, ರುದ್ರಪ್ಪ ಅಡಿವೆಪ್ಪ ಪೂಜಾರ, ನಿಂಗಪ್ಪ ಕುಬೇರಪ್ಪ ಕರಿಕೆಣ್ಣನವರ ಅವರು ತಮ್ಮ ಮೆಣಸಿನ ಹೊಲಗಳÀಲ್ಲಿ ಒಟ್ಟು 59 ಕೆಜಿ 760 ಗ್ರಾಂ ಅಕ್ ಎಂಬ ಹಸಿ ಗಾಂಜಾ ಗಿಡಗಳನ್ನು ವಶಕ್ಕೆ ಪಡೆಯಲಾಗಿದ್ದು ಇವುಗಳ ಒಟ್ಟು ಅಂದಾಜು ಮೊತ್ತ ರೂ. 2 ಲಕ್ಷ 30 ಸಾವಿರ ಆಗುತ್ತದೆ. ಈ ಕುರಿತು ಗುಡಗೇರಿ ಪೆÇಲೀಸ್ ಠಾಣೆಯಲ್ಲಿ ಮೂರು ಪ್ರತ್ಯೇಕ ಪ್ರಕರಣಗಳನ್ನು ದಾಖಲು ಮಾಡಲಾಗಿದೆ ಎಂದು ಹೇಳಿದರು.