ಪೇಡಾನಗರಿಯಲ್ಲಿ ಕನ್ನಡ ಚಿತ್ರಗೀತೆ ಸ್ಪರ್ಧೆ

ಪ್ರತಿವರ್ಷದಂತೆ ಈ ವರ್ಷ ಕೂಡಾ ಕರೋಕೆ ವಿದ್ಯಾಗಿರಿ ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ ಕನ್ನಡ ಚಿತ್ರಗೀತೆಗಳ ಸ್ಪರ್ಧೆಯನ್ನು ಧಾರವಾಡದಲ್ಲಿ ಏರ್ಪಡಿಸಲಾಗಿದೆ ಎಂದು ಸ್ಪರ್ಧೆಯ ನಡೆಸುವ ಮುಖಂಡ ಮಹಿನುಧಿನ್ ಹೇಳಿದ್ದಾರೆ. ಕರೋಕೆಯ ಆಡಿಶನ್ 4, ಜಿಲ್ಲೆಗಳಲ್ಲಿ ನಡೆಯಲಿದ್ದು, ಅಕ್ಟೋಬರ್ 3ರಂದು ಹಾವೇರಿ, 10,ರಂದು ಗದಗನಲ್ಲಿ, ಇನ್ನು 17,ಬೆಳಗಾವಿ, 24,ರಂದು ಧಾರವಾಡದಲ್ಲಿ ಆಡಿಶನ್ ನಡೆಯಲಿದೆ. ಈ ನಾಲ್ಕು ಜಿಲ್ಲೆಯ ಪ್ರತಿಭಾವಂತ ಹಾಡುಗಾರರನ್ನು ಆಯ್ಕೆ ಮಾಡಿ. ಪೈನಲ್ ಕಾರ್ಯಕ್ರಮವನ್ನು ನವಂಬರ್ ತಿಂಗಳಲ್ಲಿ ಧಾರವಾಡದಲ್ಲಿ ನಡೆಸಲಿದ್ದವೆ. ಈ ಸ್ಪರ್ಧೆಯಲ್ಲಿ ಗೆದ್ದವರಿಗೆ ಕನ್ನಡ ಗಾನ ಕೌಸ್ತಭ 2021 ಪ್ರಶಸ್ತ ನೀಡಿ ಗೌರವವಿಸಲಾಗುತ್ತದೆ ಎಂದು ಹೇಳಿದ್ರು.