ಅತ್ಯಾಚಾರಿಗಳಿಗೆ ಉಗ್ರಶಿಕ್ಷೆಯಾಗಲೆಂದು 1700 ಕಿ.ಮೀ ಸೈಕಲ್ ಜಾಥಾ ನಡೆಸಿದ ಯುವಕ
ಅತ್ಯಾಚಾರ ಪ್ರಕರಣಗಳು ಸಮಾಜವೇ ತಲೆ ತಗ್ಗುವ ವಿಚಾರವಾಗಿದೆ. ಇತ್ತೀಚೆಗೆ ಮೈಸೂರು, ಯಾದಗಿರಿಯಲ್ಲಿ ಅತ್ಯಾಚಾರ ಎಸಗಿದವರಿಗೆ ಉಗ್ರ ಶಿಕ್ಷೆಯಾಗಬೇಕು ಎಂದು ಯುವಕನೊಬ್ಬ ಕಳೆದ ಮೂವತ್ತು ದಿನದಿಂದ ಸೈಕಲ್ ಜಾಥಾ ನಡೆಸಿ ಗಮನ ಸೆಳೆದಿದ್ದಾನೆ. ಆ ಯುವಕನ ಹೆಸರೇ ಕಿರಣ್. ಬೆಂಗಳೂರಿನ ಬಸವಂತಪುರ ನಿವಾಸಿಯಾದ ಈತ ಬರೋಬ್ಬರಿ 14 ಜಿಲ್ಲೆಗಳು, 1700 ಕಿಲೋ ಮೀಟರ್ ಸೈಕಲಿನಲ್ಲಿ ಸಂಚಾರ ಮಾಡಿ ಜಾಗೃತಿ ಮೂಡಿಸಿ ಗದಗ ತಲುಪಿದ್ದಾನೆ. ಉಳಿದಿರೋ 17 ಜಿಲ್ಲೆಗಳಿಗೆ ತಲುಪಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಿದ್ದಾನೆ. ಅಖಂಡ ಕರ್ನಾಟಕವನ್ನು ಸೈಕಲ್ ಮೇಲೆಯೇ ಸುತ್ತಿ ಜಾಗೃತಿ ಮೂಡಿಸಬೇಕು ಅನ್ನೋದು ಕಿರಣ್ ಗುರಿಯಾಗಿದೆ. ಈತನ ಈ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.