ರೈತರಿಗೆ ಸೋಲಾರ್ ಪಂಪ್ ಖರೀದಿಗೆ ಸಿಗುತ್ತೆ ಸಬ್ಸಿಡಿ

ಬೆಂಗಳೂರು: ತೋಟಗಾರಿಕೆ ಇಲಾಖೆ ಕೃಷಿಕರಿಗೆ ಸೋಲಾರ್ ಪಂಪ್ ಸೆಟ್ ನೀಡಲು ಮುಂದಾಗಿದೆ. ಪ್ರಸಕ್ತ ವರ್ಷದಿಂದ ರೈತರಿಗೆ ಸೋಲಾರ್ ಪಂಪ್‌ಸೆಟ್ ಖರೀದಿಗೆ ಶೇ.50ರಷ್ಟು ಸಬ್ಸಿಡಿಯನ್ನು ತೋಟಗಾರಿಕೆ ಇಲಾಖೆ ವತಿಯಿಂದ ನೀಡಲಾಗುವುದು. ಸಾಮಾನ್ಯ ವರ್ಗದವರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಏಕ ರೀತಿಯ ಅನುದಾನ ನೀಡಲಾಗುತ್ತದೆ. ಈಗಾಗಲೇ ಅಳವಡಿಸಿದ ವಿದ್ಯುತ್ ಚಾಲಿತ ಪಂಪ್‌ಗಳನ್ನು ತೆಗೆದಿಡಬೇಕು. ಪ್ಯಾನೆಲ್ ಬೋರ್ಡ್, ಮೋಟರ್ ಸಹಿತ ಸೋಲಾರ್ ಪಂಪ್‌ಗಳನ್ನು ಜೋಡಿಸಿಕೊಳ್ಳಬಹುದು