KSRTC, BMTC ಬಸ್ ಪ್ರಯಾಣಿಕರ ಗಮನಕ್ಕೆ: ಇಂದು ಎಂದಿನಂತೆ ಸಾರಿಗೆ ಬಸ್ ಸಂಚಾರ - ನಿಗಮಗಳ ಸ್ಪಷ್ಟನೆ

KSRTC, BMTC ಬಸ್ ಪ್ರಯಾಣಿಕರ ಗಮನಕ್ಕೆ: ಇಂದು ಎಂದಿನಂತೆ ಸಾರಿಗೆ ಬಸ್ ಸಂಚಾರ - ನಿಗಮಗಳ ಸ್ಪಷ್ಟನೆ

ಬೆಂಗಳೂರು: ಕೆಲವು ಸರ್ಕಾರಿ ನೌಕರರ ಸಂಘಗಳು ಮಾರ್ಚ್ 1ರ ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದೆ ಎಂದು ತಿಳಿದು ಬಂದಿದೆ. ಈ ನಿಟ್ಟಿನಲ್ಲಿ ಎಲ್ಲಾ ಬಿ.ಎಂ.ಟಿ.ಸಿ, ಕೆ ಎಸ್ ಆರ್ ಟಿ ಸಿ ಬಸ್‌ಗಳು ಕಾರ್ಯನಿರ್ವಹಿಸಲಿದ್ದು, ಬಿಎಂಟಿಸಿ ಕೆ ಎಸ್ ಆರ್ ಟಿ ಸಿ ಬಸ್‌ಗಳ ಸಂಚಾರಕ್ಕೆ ಯಾವುದೇ ಅಡ್ಡಿ ಇಲ್ಲ ಕಾರ್ಯಾಚರಣೆ ಎಲ್ಲಾ BMTC, KSRTC ಯಾವುದೇ ಅಡ್ಡಿಯಿಲ್ಲದೆ ಇಂದು ಕಾರ್ಯನಿರ್ವಹಿಸುತ್ತದೆ ಎಂದು ಸಂಸ್ಥೆ ತಿಳಿಸಿದೆ.

ಸಾರ್ವಜನಿಕರೇ ಗಮನಿಸಿ: ನಾಳೆಯಿಂದ ಸರ್ಕಾರಿ ನೌಕರರ ಪ್ರತಿಭಟನೆ, ಮನೆಯಿಂದ ಹೊರಡುವ ಮುನ್ನ ಚಿಂತಿಸಿ

ಬೆಂಗಳೂರು: ಓದುಗರೇ ಇಂದಿನಿಂದ ಸರ್ಕಾರಿ ಕಚೇರಿಗಳೇ ಬಂದ್‌ ಆಗಲಿದ್ದು, ಇಂದು ಏನೇ ಕೆಲಸಗಳು ಇದ್ದರೇ, ಮನೆಯಿಂದ ಹೊರಡುವ ಮುನ್ನ ಚಿಂತಿಸುವುದು ಒಳಿತು. ಹೌದು, ಏಳನೇ ವೇತನ ಆಯೋಗ ಜಾರಿ ಸೇರಿದಂತೆ ಇಂದಿನಿಂದ ನೌಕರರು ಪ್ರತಿಭಟನೆ ಹಾದಿ ಹಿಡಿದಿದೆ.

ತಡರಾತ್ರಿಯವರೆಗೆ ಸಿಎಂ ಬಸವರಾಜ ಬೊಮ್ಮಾಯಿ ಜೊತೆಗೆ ಸರ್ಕಾರಿ ನೌಕರರ ಸಂಘದ ಜೊತೆಗೆ ನಡೆದಂತ ಸಭೆಯಲ್ಲಿ ಯಾವುದೇ ನಿರ್ಧಾರಕ್ಕೆ ಬಂದಿಲ್ಲ. ಸಿಎಂ ಬಸವರಾಜ ಬೊಮ್ಮಾಯಿ ಅವರು ಮಧ್ಯಂತರ ವೇತನ ಹೆಚ್ಚಳ ಪ್ರಸ್ತಾವನೆ ಮುಂದಿಟ್ಟಾಗ ಶೇ.40ರಷ್ಟು ಹೆಚ್ಚಳಕ್ಕೆ ನೌಕರರ ಸಂಘದಿಂದ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಇಂದು ಕೂಡ ಈ ಸಂಬಂಧ ಸಿಎಂ ಜೊತೆಗೆ ಸಭೆ ನಡೆಯಲಿದ್ದು, ಅಂತಿಮ ನಿರ್ಧಾರ ಪ್ರಕಟವಾಗಲಿದೆ.

ಇಂದು ಯಾವೆಲ್ಲ ಕಚೇರಿಗಳು ಬಂದ್‌ ಆಗಲಿದೆ

  • ಜಿಲ್ಲಾಧಿಕಾರಿ ಕಚೇರಿ
  • ತಾಲೂಕ್‌ ಕಚೇರಿ
  • ಗ್ರಾಮಪಂಚಾಯತಿ
  • ಸರ್ಕಾರಿ ಶಾಲೆ
  • ಸರ್ಕಾರಿ ಕಾಲೇಜು
  • ವಿಶ್ವವಿದ್ಯಾನಿಲಯಗಳು
  • ಪುರಸಭೆ
  • ನಗರಸಭೆ
  • ಕಂದಾಯ ಇಲಾಖೆ
  • ಸರ್ಕಾರಿ ಹಾಸ್ಟೆಲ್‌ಗಳ ಸೇವೆಯಲ್ಲಿ ವ್ಯತ್ಯಾಸ ಆಗಲಿದೆ.