ಗೋಕರ್ಣ ಕುಡ್ಲೆ ಸಮುದ್ರದಲ್ಲಿ ಪ್ರವಾಸಿಗ ಸಾವು | Uttara Kannada |
ಉತ್ತರಕನ್ನಡ ಜಿಲ್ಲೆಯ ಗೋಕರ್ಣದ ಕುಡ್ಲೆ ಸಮುದ್ರದಲ್ಲಿ ಈಜಲು ಹೋಗಿ ಪ್ರವಾಸಿಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ಬೀದರ್ ಮೂಲದ ವಿಕ್ರಮ ಜಾದವ್ (21) ಮೃತ ದುರ್ದೈವಿ. ಈತ ಬೆಂಗಳೂರಿನ ಬಿಎಂಸಿ ಕಾಲೇಜಿನ ವಿದ್ಯಾರ್ಥಿ ಎಂದು ತಿಳಿದು ಬಂದಿದೆ. ಆರು ಜನ ಸ್ನೇಹಿತರು ಗೋಕರ್ಣ ಪ್ರವಾಸಕ್ಕೆ ಬಂದಿದ್ದರು. ಆಗ ಜಾದವ್ ಈಜಲು ಹೋದ ವೇಳೆ ಸುಳಿಗೆ ಸಿಕ್ಕಿ ಮೃತಪಟ್ಟಿದ್ದು, ಗೋಕರ್ಣ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.