3 ಕೋಟಿ 'ಭಾರತೀಯ ರೈಲ್ವೆ ಬಳಕೆದಾರ'ರ ಡೇಟಾ ಸೋರಿಕೆ

ನವದೆಹಲಿ: 3 ಕೋಟಿ ಭಾರತೀಯ ರೈಲ್ವೆ ಡೇಟಾ ಸೋರಿಕೆಯಾಗಿರೋದಾಗಿ ತಿಳಿದು ಬಂದಿದೆ. ಆದ್ರೇ ಡೇಟಾ ಉಲ್ಲಂಘನೆ ನಮ್ಮ ಸರ್ವರ್ಗಳಿಂದಲ್ಲ ಎಂದು ಐಆರ್ಸಿಟಿಸಿ ತಿಳಿಸಿದೆ. ಅಲ್ಲದೇ ಡೇಟಾ ಸೋರಿಕೆಯನ್ನು ಪರಿಶೀಲಿಸಲು ಎಲ್ಲಾ ವ್ಯಾಪಾರ ಪಾಲುದಾರರನ್ನು ಕೇಳಲಾಗಿದೆ.
ಡಾರ್ಕ್ ವೆಬ್ ಹ್ಯಾಕರ್ ಫೋರಂನಲ್ಲಿ 3 ಕೋಟಿ ಭಾರತೀಯ ರೈಲ್ವೆ ಬಳಕೆದಾರರ ಡೇಟಾ ಸೋರಿಕೆಯಾಗಿದೆ. ಹ್ಯಾಕ್ ಮಾಡಲಾದ ಪ್ಲಾಟ್ಫಾರ್ಮ್ನ ಮೂಲವನ್ನು ಬಹಿರಂಗಪಡಿಸಲು ನಿರಾಕರಿಸಿದ ಹ್ಯಾಕರ್, 2022 ರಲ್ಲಿ ಭಾರತೀಯ ರೈಲ್ವೆಯಲ್ಲಿ ಟಿಕೆಟ್ ಕಾಯ್ದಿರಿಸಿದ ಬಳಕೆದಾರರ ಇನ್ವಾಯ್ಸ್ಗಳು ಮತ್ತು ವೈಯಕ್ತಿಕ ಡೇಟಾವನ್ನು ತೋರಿಸುವ ಡೇಟಾದ ಮಾದರಿಗಳನ್ನು ಹಂಚಿಕೊಂಡಿದ್ದಾರೆ. 2022 ರ ಡಿಸೆಂಬರ್ 31 ರಂದು ಪ್ರಯಾಣಿಸುವ ಜನರ ಇತ್ತೀಚಿನ ಡೇಟಾ ಕೂಟ ಸೋರಿಕೆಯಾಗಿರೋದಾಗಿ ಹೇಳಲಾಗುತ್ತಿದೆ.