23 ಪ್ರಾಧ್ಯಾಪಕರನ್ನು ಹುದ್ದೆ ಸಹಿತ ಸ್ಥಳಾಂತರ: ಸರಕಾರ ಆದೇಶ

23 ಪ್ರಾಧ್ಯಾಪಕರನ್ನು ಹುದ್ದೆ ಸಹಿತ ಸ್ಥಳಾಂತರ: ಸರಕಾರ ಆದೇಶ

ಬೆಂಗಳೂರು, : ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅಗತ್ಯ ಕಾರ್ಯಭಾರವಿಲ್ಲದ 23 ಪ್ರಾಧ್ಯಾಪಕರನ್ನು ಕಾರ್ಯಭಾರವಿರುವ ಕಾಲೇಜುಗಳಿಗೆ ಹುದ್ದೆ ಸಹಿತ ಸ್ಥಳಾಂತರ ಮಾಡಿ ಸರಕಾರ ಆದೇಶ ಹೊರಡಿಸಿದೆ.

ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಮಾರ್ಗಸೂಚಿ ಅನ್ವಯ ಬೋಧಕರು ವಾರಕ್ಕೆ 16 ಗಂಟೆಯಿಂದ 20ಗಂಟೆಯವರೆಗೆ ನೇರ ಬೋಧನಾ ಚಟುವಟಿಕೆಗಳಲ್ಲಿ ತೊಡಗಬೇಕು.

ಆದರೆ ಕಾಲೇಜುಗಳಲ್ಲಿ ಕೆಲವು ವಿಷಯ ಸಮೂಹಗಳಿಗೆ ವಿದ್ಯಾರ್ಥಿಗಳು ದಾಖಲಾತಿ ಪಡೆಯದ ಹಿನ್ನೆಲೆಯಲ್ಲಿ ಅಂತಹ ವಿಷಯಗಳನ್ನು ಬೋಧಿಸುತ್ತಿರುವ ಬೋಧಕರಿಗೆ ನಿಗಧಿಪಡಿಸಿದ ಕಾರ್ಯಭಾರ ಲಭ್ಯವಾಗುತ್ತಿಲ್ಲ.

ಹಾಗಾಗಿ ವರ್ಗಾವಣೆಯನ್ನು ನಿಯಂತ್ರಿಸುವ ಸಲುವಾಗಿ ಶೈಕ್ಷಣಿಕ ಹಿತದೃಷ್ಟಿಯಿಂದ ಹೆಚ್ಚು ಕಾರ್ಯಭಾರಯಿರುವ ಕಾಲೇಜುಗಳಿಗೆ ಪ್ರಾಧ್ಯಾಪಕರನ್ನು ಹುದ್ದೆಸಹಿತ ಸ್ಥಳಾಂತರ ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಿದೆ.