ಡಿ.ಕೆ. ಬ್ರದರ್ಸ್ ಷಡ್ಯಂತ್ರದಿಂದ ಬಲವಂತವಾಗಿ ಜೆಡಿಎಸ್ ಗೆ ಕ್ಷೇತ್ರ ಬಿಟ್ಟುಕೊಟ್ಟು 2 ನೇ ಬಾರಿ ಸಂಸದನಾಗುವುದನ್ನು ತಡೆದರು: ಮುದ್ದಹನುಮೇಗೌಡ

ಡಿ.ಕೆ. ಬ್ರದರ್ಸ್ ಷಡ್ಯಂತ್ರದಿಂದ ಬಲವಂತವಾಗಿ ಜೆಡಿಎಸ್ ಗೆ ಕ್ಷೇತ್ರ ಬಿಟ್ಟುಕೊಟ್ಟು 2 ನೇ ಬಾರಿ ಸಂಸದನಾಗುವುದನ್ನು ತಡೆದರು: ಮುದ್ದಹನುಮೇಗೌಡ

ತುಮಕೂರು: ನಾನು ಎರಡನೇ ಸಲ ತುಮಕೂರು ಕ್ಷೇತ್ರದ ಸಂಸದನಾಗುವುದನ್ನು ತಡೆಯುವ ಉದ್ದೇಶದಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಸಂಸದ ಡಿ.ಕೆ. ಸುರೇಶ್ ಸಹೋದರರು ಷಡ್ಯಂತ್ರ ರೂಪಿಸಿದ್ದರು ಎಂದು ಮಾಜಿ ಸಂಸದ ಎಸ್.ಪಿ. ಮುದ್ದಹನುಮೇಗೌಡ ಆರೋಪಿಸಿದ್ದಾರೆ.

ಕುಣಿಗಲ್ ತಾಲೂಕಿನ ಅಂಚೆಪಾಳ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡಿ.ಕೆ. ಸಹೋದರರ ಷಡ್ಯಂತ್ರದ ಭಾಗವಾಗಿಯೇ ಕಳೆದ ಲೋಕಸಭೆ ಚುನಾವಣೆಯಲ್ಲಿ ತುಮಕೂರು ಕ್ಷೇತ್ರವನ್ನು ಜೆಡಿಎಸ್ ಪಕ್ಷಕ್ಕೆ ಬಲವಂತವಾಗಿ ಬಿಟ್ಟುಕೊಟ್ಟರು. ಈ ವಿಚಾರ ತಿಳಿದಿದ್ದರೂ ಜಿ. ಪರಮೇಶ್ವರ್ ಮೌನ ವಹಿಸಿದ್ದರು ಎಂದು ಆರೋಪಿಸಿದ್ದಾರೆ.

ಒಕ್ಕಲಿಗರೊಬ್ಬರು ಎರಡನೇ ಸಲ ಸಂಸದರಾಗುವುದನ್ನು ಡಿ.ಕೆ. ಸಹೋದರರು ತಡೆದರು. ಕಾಂಗ್ರೆಸ್ ನಲ್ಲಿ ನಿರಂತರವಾಗಿ ಅವರಿಬ್ಬರು ಅನ್ಯಾಯ ಮಾಡುತ್ತಲೇ ಬಂದರು. ನಾನು ಎರಡನೇ ಬಾರಿ ಸಂಸದನಾಗುವುದನ್ನು ತಪ್ಪಿಸಿದರು. ಬಲವಂತವಾಗಿ ಜೆಡಿಎಸ್ ಪಕ್ಷಕ್ಕೆ ತುಮಕೂರು ಕ್ಷೇತ್ರ ಬಿಟ್ಟುಕೊಟ್ಟರು ಎಂದು ದೂರಿದ್ದಾರೆ.