‘ನಿಮ್ಮ ಮನಸ್ಸಿನಲ್ಲಿರುವ ರಾಹುಲ್ ಗಾಂಧಿಯನ್ನು ನಾನೇ ಕೊಂದಿದ್ದೇನೆ’ ಎಂದ ರಾಗಾ !

ನಾನು ರಾಹುಲ್ ಗಾಂಧಿಯನ್ನು ಕೊಂದಿದ್ದೇನೆ ಎಂದು ರಾಹುಲ್ ಗಾಂಧಿ ಮಾಧ್ಯಮದ ಬಳಿ ಒಗಟಾಗಿ ಮಾತನಾಡಿದ್ದಾರೆ. ಒಮ್ಮೆ ಎಲ್ಲರಿಗೂ ಆಶ್ಚರ್ಯವೆನಿಸಿದ್ದಂತೂ ಸತ್ಯ. ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆಯ 118ನೇ ದಿನದ ಅಂಗವಾಗಿ ಹರ್ಯಾಣದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ‘ನಿಮ್ಮ ಮನಸ್ಸಿನಲ್ಲಿರುವ ರಾಹುಲ್ ಗಾಂಧಿಯನ್ನು ನಾನೇ ಕೊಂದಿದ್ದೇನೆ. ರಾಹುಲ್ ಗಾಂಧಿ ನನ್ನ ತಲೆಯಲ್ಲಿಲ್ಲ. ಅವರು ಹೋಗಿದ್ದಾರೆ ಎಂದು ಒಗಟಾಗಿ ಮಾತನಾಡಿದ್ದಾರೆ.