'PSI' ಹೆಸರಿನಲ್ಲಿ ಸರಸ ಸಲ್ಲಾಪ, 50 ಮಹಿಳೆಯರಿಗೆ ದೋಖಾ : ಹುಬ್ಬಳ್ಳಿ ಮೂಲದ ವಂಚಕ ಅರೆಸ್ಟ್
ಬೆಳಗಾವಿ : 'ಪಿಎಸ್‌ಐ' ಹೆಸರಲ್ಲಿ ಖದೀಮನೋರ್ವ ನಕಲಿ ಇನ್ಸ್ಟಾಗ್ರಾಮ್ ಖಾತೆ ತೆರೆದು ಮಹಿಳೆಯರ ಜೊತೆ ಆನ್ ಲೈನ್ ನಲ್ಲೇ ಸರಪ ಸಲ್ಲಾಪ ನಡೆಸಿ ವಂಚನೆ ಎಸಗಿದ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ.
'ಪಿಎಸ್‌ಐ' ಹೆಸರಲ್ಲಿ ನಕಲಿ ಇನ್ಸ್ಟಾಗ್ರಾಮ್ ಖಾತೆ ತೆರೆದು 50 ಜನ ಮಹಿಳೆಯರಿಗೆ ವಂಚಿಸಲಾಗಿದೆ.
ಈತ ನಕಲಿ ಖಾತೆಯನ್ನು ತೆರೆದು ಯುವತಿಯರನ್ನು ಪುಸಲಾಯಿಸಿ, ಆನ್ ಲೈನ್ ಚಾಟಿಂಗ್ ಮೂಲಕ ಸರಸ ಸಲ್ಲಾಪ ನಡೆಸಿ 50 ಕ್ಕೂ ಹೆಚ್ಚು ಮಂದಿಯನ್ನು ವಂಚಿಸಿದ್ದಾನೆ. ಇದಲ್ಲದೇ ಹತ್ತಾರು ಯುವತಿಯರು ಕೂಡ ಈತನಿಗೆ ಪ್ರೇಮ ನಿವೇದನೆ ಮಾಡಿದ್ದಾರೆ ಎನ್ನಲಾಗಿದೆ. ಅಲ್ಲದೇ ಸಮಾಜ ಸೇವೆ ಮಾಡುತ್ತೇನೆ ಎಂದು 4 ಲಕ್ಷ ರೂ ಹಣ ಪಡೆದು ವಂಚನೆ ಮಾಡಿದ್ದಾನೆ. ಮಹಾರಾಷ್ಟ್ರದ ಯುವತಿ ನಕಲಿ ಪಿಎಸ್ ಐ ಗೆ ಬರೆದ ಪ್ರೇಮ ಪತ್ರ ಅಸಲಿ ಅಧಿಕಾರಿ ಕೈಗೆ ತಲುಪಿದ್ದು, ಬಳಿಕ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ನಕಲಿ ಖಾತೆ ಸೃಷ್ಟಿಯಾಗಿರುವ ಬಗ್ಗೆ ಪಿಎಸ್ಸೈ ಅನಿಲ್ ಕುಮಾರ್ ಕಂಬಾರ್ ದೂರು ನೀಡಿದ್ದರು. ಸದ್ಯ ಆರೋಪಿ ವಿಜಯ ಕುಮಾರ್ ಬರಲಿ(28) ಯನ್ನು ಪೊಲೀಸರು ಬಂಧಿಸಿ ಕೋರ್ಟ್ ಗೆ ಒಪ್ಪಿಸಿದ್ದಾರೆ.