ಸ್ವಾಭಿಮಾನಿ ಗೆಳೆಯರ ಬಳಗದಿಂದ ವನ್ಯಜೀವಿಗಳಿಗೆ ಕುಡಿಯುವ ನೀರಿನ ತೊಟ್ಟಿಗಳ ನಿರ್ಮಾಣ

ಸ್ವಾಭಿಮಾನಿ ಗೆಳೆಯರ ಬಳಗದಿಂದ ವನ್ಯಜೀವಿಗಳಿಗೆ ಕುಡಿಯುವ ನೀರಿನ ತೊಟ್ಟಿಗಳ ನಿರ್ಮಾಣ

ಇತ್ತೀಚಿಗೆ ಬೀದರ್ ಜಿಲ್ಲೆಯಲ್ಲಿ ಬಿಸಿಲಿನ ತಾಪಾಮಾನ ಏರಿಕೆ ಹೆಚ್ಚಾಗಿದೆ.ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದೆ.....

ಸದ್ಯ ಮಾನವನಿಗೆ ಕುಡಿಯುವ ನೀರಿಗಾಗಿ ಸಾಕಷ್ಟು ಯೋಜನೆಗಳನ್ನು ಸರ್ಕಾರದವತಿಯಿಂದ ಮತ್ತು ಸಂಘ ಸಂಸ್ಥೆಗಳ ವತಿಯಿಂದ ಮಾಡಲಾಗುತ್ತದೆ.ಆದರೆ ವನ್ಯಜೀವಿಗಳಿಗೆ ಕುಡಿವ ನೀರು ಸಿಗದೆ ಇರುವಾಗ ಮೂಕ ಪ್ರಾಣಿ ಪಕ್ಷಿಗಳ ಯಾರ ಮುಂದೆ ಹೇಳುವುದು.ಇಂತಹ ಸಮಯದಲ್ಲಿ ಅರಣ್ಯ ಇಲಾಖೆ ಕುಡಿಯುವ ನೀರಿಗಾಗಿ ಯಾವುದೇ ಯೋಜನೆಗಳನ್ನು ರೂಪಿಸಿಲ್ಲ.
ಇದನ್ನು ಅರಿತ ಸ್ವಾಭಿಮಾನಿ ಗೆಳೆಯರ ಬಳಗದ ತಂಡ ವನ್ಯಜೀವಿಗಳಿಗೆ ಕುಡಿಯುವ ನೀರಿನ ತೊಟ್ಟಿಯನ್ನು ನಿರ್ಮಿಸಿದ್ದಾರೆ.

ಅಂದ ಹಾಗೇ ಬೀದರ್ ಜಿಲ್ಲೆಯ ಹಲವು ಅರಣ್ಯ ಪ್ರದೇಶದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಾರೆ.ಶಹಾಪುರ ಅರಣ್ಯ ಪ್ರದೇಶ ಹಾಗೂ ಚಿಟ್ಟಾ ಕಾಯ್ದಿಟ್ಟ ಅರಣ್ಯ ಪ್ರದೇಶ ಮತ್ತು ನಿರ್ಣ ಅರಣ್ಯ ಪ್ರದೇಶದಲ್ಲಿ ನೀರಿನ ಕಾಂಕ್ರೀಟ್ ತೊಟ್ಟಿಗಳನ್ನು ನಿರ್ಮಾಣ ಮಾಡಿ ಪ್ರತಿದಿನ ನೀರು ತುಂಬುತ್ತಾರೆ. ಹೀಗಾಗಿ ಬಿಸಿಲಿನ ಝಳಕ್ಕೆ ಸೋತುಹೋದ ವನ್ಯ ಜೀವಿಗಳಾದ ಜಿಂಕೆ, ಮಂಗಗಳು, ನವಿಲುಗಳು ಇದೆ ಹೊಂಡದಲ್ಲಿ ನೀರು ಕುಡಿದು ದಾಹ ತೀರಿಸಿಕೊಳ್ಳುತ್ತಿವೆ

ಇನ್ನು ಸ್ವಾಭಿಮಾನಿ ಗೆಳೆಯರ ಬಳಗದ ಸದಸ್ಯರು ತಮ್ಮ ಸ್ವಂತ ಖರ್ಚಿನಲ್ಲಿ ಹೊಂಡಗಳನ್ನು ನಿರ್ಮಿಸಿದ್ದಾರೆ.ಒಂದು ಹೊಂಡದಲ್ಲಿ 120ಲೀ ನೀರು ಸಂಗ್ರಹವಾಗುತ್ತದೆ.

ಒಟ್ಟಾರೆ ಇನ್ನೂ ಮುಂದೆ ಜಿಲ್ಲಾ ಆಡಳಿತ ಮತ್ತು ಅರಣ್ಯ ಇಲಾಖೆ ಎಚ್ಚತಗೊಂಡು ಮೂಕ ಪ್ರಾಣಿಗಳಿಗೆ ನೀರಿನ ವ್ಯವಸ್ಥೆ ಮಾಡುತ್ತಾರೆ ಎಂಬುದು ಕಾದು ನೋಡಬೇಕು.

ವರದಿ:- ಮಹೇಶ್ ಸಜ್ಜನ ಬೀದರ್