ಸ್ಟೇರಿಂಗ್‌ ರಾಡ್‌ ಕಟ್‌ ಆಗಿ ಬಸ್‌ ಪಲ್ಟಿ : 25ಕ್ಕೂ ಹೆಚ್ಚು ಪಯಾಣಿಕರು ಅಪಾಯದಿಂದ ಪಾರು

ಸ್ಟೇರಿಂಗ್‌ ರಾಡ್‌ ಕಟ್‌ ಆಗಿ ಬಸ್‌ ಪಲ್ಟಿ : 25ಕ್ಕೂ ಹೆಚ್ಚು ಪಯಾಣಿಕರು ಅಪಾಯದಿಂದ ಪಾರು

ಧಾರವಾಡ : ಜಿಲ್ಲೆಯ ಕಲಘಟಗಿಯ ಜೋಡಹಳ್ಳಿಯ ಬಳಿಯ ಭೀಕರ ಬಸ್‌ ಅಪಘಾತ ಸಂಭವಿಸಿದ್ದು, ಬಸ್ಸಿನಲ್ಲಿದ್ದ 25 ಕ್ಕೂ ಹೆಚ್ಚು ಪಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.

ಚಲಿಸುತ್ತಿದ್ದ ಬಸ್ಸಿನ ಸ್ಟೇರಿಂಗ್‌ ರಾಡ್‌ ಕಟ್‌ ಆಗಿ ಬಸ್ಸು ಪಲ್ಟಿ ಹೊಡೆದ ತಪ್ಪಿದ ಭಾರೀ ಅನಾಹುತ ಬೆಳಕಿಗೆ ಬಂದಿದ್ದು, ಕಲಘಟಗಿಯಿಂದ ಧಾರವಾಡಕ್ಕೆ ತೆರಳುತ್ತಿದ್ದ ಬಸ್ಸ್‌ ಇದಾಗಿತ್ತು, ಚಾಲಕ ಸಮಯ ಪ್ರಜ್ಞೆಯಿಂದ ಈ ದುರಂತ ಘಟನೆ ತಪ್ಪಿದೆ ಎಂಬ ಮಾಹಿತಿ ಲಭ್ಯವಾಗಿದೆ.